
ನವದೆಹಲಿ (ಅ.27): ಬೇಹುಗಾರಿಕೆ ನಡೆಸಿರುವ ಆರೋಪದಲ್ಲಿ ಇಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದ ಪಾಕಿಸ್ತಾನ್ ಹೈಕಮಿಷನ್ ಕಛೇರಿ ಅಧಿಕಾರಿ ಬಳಿ ಬಿಎಸ್ಎಫ್’ಗೆ ಸಂಬಂಧಿಸಿದ ದಾಖಲೆಗಳಿತ್ತು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಪಾಕಿಸ್ತಾನಿ ಅಧಿಕಾರಿಯಿಂದ ವಶಪಡಿಸಲಾದ ದಾಖಲೆಗಳಲ್ಲಿ ಬಿಎಸ್ಎಫ್ ನಿಯೋಜನೆ, ಅದಕ್ಕೆ ಸಂಬಂಧಿಸಿದ ನಕ್ಷೆಗಳು ಹಾಗೂ ಬಿಎಸ್ಎಫ್ ಯೋಧರ ವಿವರಗಳು ಇವೆ ಎಂದು ಕ್ರೈಂ ಬ್ರಾಂಚ್ ಜಂಟಿ ಆಯುಕ್ತ ರವೀಂದ್ರ ಯಾದವ್ ಹೇಳಿದ್ದಾರೆ.
ಮೌಲಾನ ರಮಝಾನ್ ಖಾನ್ ಅಲಿಯಾಸ್ ರಿಯಾಝ್ ಹಝ್ರತ್ ಹಾಗೂ ಸುಭಾಶ್ ಜಹಾಂಗೀರ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಇಬ್ಬರೂ ಕೂಡಾ ಲಾಹೋರ್’ನವರು. ಮೌಲಾನ ರಮಝಾನ್ ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತಿದ್ದ ಹಾಗೂ ಸುಭಾಶ್ ಲಾಹೋರ್’ನಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಅವರಿಬ್ಬರು ಸೇರಿ ಪಾಕಿಸ್ತಾನದ ಐಎಸ್ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.