
ಮೈಸೂರು(ಸೆ.30): 407ನೇ ಜಂಬು ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ಈ ಬಾರಿ ಹೊಸ ಸಾರಥಿಯಾಗಿ ವಿನು ಆಯ್ಕೆಯಾಗಿದ್ದಾನೆ. ತಾಲೀಮು ವೇಳೆ ಅರ್ಜುನ ಆನೆ ವಿನು ಜೊತೆ ಅಷ್ಟೊಂದು ಸಹಕರಿಸುತ್ತಿರಲಿಲ್ಲ. ಹೀಗಾಗಿ ಕಾವಾಡಿ ಮಹೇಶನೇ ಈ ಬಾರಿ ಅರ್ಜುನನನ್ನು ಮುನ್ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಅರ್ಜುನ ಹಾಗೂ ಮಾವುತ ವಿನು ಚೆನ್ನಾಗಿ ಹೊಂದಿಕೊಂಡಿದ್ದು, ವಿನುವೇ ಈ ಬಾರಿ ಅರ್ಜುನಿಗೆ ಮಾವುತ ಎಂದು ನಿನ್ನೆ ಅರಣ್ಯ ಇಲಾಖೆ ಅಂತಿಮ ನಿರ್ಧಾರ ಕೈಗೊಂಡಿದೆ.
ಕಳೆದ ವರ್ಷ ಜಂಬೂಸವಾರಿ ನಡೆಯುವ ಮುನ್ನವೇ ಅರ್ಜುನ ಆನೆಯ ಮಾವುತ ದೊಡ್ಡ ಮಾಸ್ತಿ ತೀರಕೊಂಡಿದ್ದ. ಆಗ ಮಾವುತನಾಗಿ ವಿನು ನೇಮಕವಾಗಿದ್ದರೂ ಅರ್ಜುನ ಆನೆ ವಿನು ಜೊತೆ ಸಹಕರಿಸಿರಲಿಲ್ಲ. ಆಗ ದೊಡ್ಡ ಮಾಸ್ತಿ ಪುತ್ರ ಕಾವಾಡಿ ಮಹೇಶ್ ಆನೆಯನ್ನ ಮುನ್ನಡೆಸಿದ್ದ. ಹೀಗಾಗೇ ಈ ಬಾರಿ ವಿನು ಹಾಗೂ ಮಹೇಶ್ ಜೊತೆ ಮಾವುತ ಸ್ಥಾನಕ್ಕೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ವಿನು ಅಂಬಾರಿ ಆನೆ ಮುನ್ನಡೆಸಲಿದ್ದಾನೆ.
ಮಾವುತ ವಿನು ತಂದೆ ದೊಡ್ಡಪ್ಪಾಜಿ ಅತೀ ಹೆಚ್ಚು ಬಾರಿ ಅಂಬಾರಿ ಹೊತ್ತ ದ್ರೋಣ ಆನೆಯ ಕಾವಾಡಿಯಾಗಿದ್ದ. 10 ವರ್ಷದ ಹಿಂದೆ ಕಾವಾಡಿಯಾಗಿ ಸೇವೆಗೆ ಸೇರಿದ್ದ ವಿನು ಕಳೆದ ವರ್ಷವೇ ಮಾವುತನಾಗಿ ಭಡ್ತಿ ಪಡೆದಿದ್ದಾನೆ. ಈ ಬಾರಿ ಸಾಂಸ್ಕೃತಿಕ ವೈಭವದ ಕೇಂದ್ರ ಬಿಂದುವಾದ ಚಿನ್ನದ ಅಂಬಾರಿ ಮುನ್ನಡೆಸುವ ಮಹತ್ವದ ಜವಾಬ್ದಾರಿ ಹೊತ್ತ ವಿನುಗೆ ಆಲ್ ದಿ ಬೆಸ್ಟ್ ಹೇಳೋಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.