ವಾಹನ ನೋಂದಣಿಗೆ 1000 ಹೊಸ ಸೆಸ್‌

By Suvarna Web DeskFirst Published Jun 22, 2017, 11:59 AM IST
Highlights

ಇನ್ನುಮುಂದೆ ವಾಹನ ಖರೀದಿಸಿ ನೋಂದಣಿ ಮಾಡಿಸುವವರು ಸುಮಾರು 1,000 ವರೆಗೂ ಹೊಸ ಸೆಸ್‌ ಪಾವತಿಸ ಬೇಕಾಗುತ್ತದೆ. ಹೀಗೆ ವಾಹನ ಖರೀದಿದಾರರಿಗೆ ನೋಂದಣಿ ಸಮಯದಲ್ಲಿ ಉಪಕರ ವಿಧಿಸಲು ಅನುವು ಮಾಡುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಡಿಸಿದರು.

ವಿಧಾನಸಭೆ : ಇನ್ನುಮುಂದೆ ವಾಹನ ಖರೀದಿಸಿ ನೋಂದಣಿ ಮಾಡಿಸುವವರು ಸುಮಾರು 1,000 ವರೆಗೂ ಹೊಸ ಸೆಸ್‌ ಪಾವತಿಸ ಬೇಕಾಗುತ್ತದೆ. ಹೀಗೆ ವಾಹನ ಖರೀದಿದಾರರಿಗೆ ನೋಂದಣಿ ಸಮಯದಲ್ಲಿ ಉಪಕರ ವಿಧಿಸಲು ಅನುವು ಮಾಡುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ವಿಧೇಯಕವನ್ನು ಬುಧವಾರ ವಿಧಾನಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಡಿಸಿದರು.

ಸುದೀರ್ಘ ಚರ್ಚೆ ನಂತರ ಸದನ ಈ ವಿಧೇಯಕಕ್ಕೆ ಒಪ್ಪಿಗೆಯನ್ನೂ ನೀಡಿತು. ಕಾಯ್ದೆ ಪ್ರಕಾರ ಈ ಹಿಂದೆ ಇದ್ದ ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಲಾಗುತ್ತದೆ.

ರಾಜ್ಯದಲ್ಲಿ ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಪರಿಷತ್ತು ರಚನೆ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರಗಳನ್ನು ರಚಿಸಲಾಗುತ್ತದೆ. ಈ ಸಂಸ್ಥೆಗಳು ಹೊಸ ವಾಹನ ನೋಂದಣಿ ಸಮಯದಲ್ಲಿ 1,000 ವರೆಗೂ ಉಪ ಕರವನ್ನು ಸಂಗ್ರಹಿಸಿ ಅದನ್ನು ರಸ್ತೆ ಸುರಕ್ಷತೆ ನಿಧಿಯಲ್ಲಿ ತೊಡಗಿಸುತ್ತವೆ. ಹಾಗೆಯೇ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಲ್ಲಿಸುವ ದೂರುಗಳ ವಿಚಾರಣೆ, ಪರಿಹಾರ ಕ್ರಮಕ್ಕೆ ಆದೇಶ ನೀಡಲಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ಸದನಕ್ಕೆ ಹೇಳಿದರು.

click me!