ಭಾರತ ಹಿಂದೂ ರಾಷ್ಟ್ರವೇ? ಅಧ್ಯಯನದಲ್ಲಿ ಸಿಕ್ತು ಅಚ್ಚರಿ ಮೂಡಿಸುವ ಉತ್ತರ!

By Web DeskFirst Published Jun 13, 2019, 5:37 PM IST
Highlights

ಭಾರತ ಹಿಂದೂ ರಾಷ್ಟ್ರವೇ?| CSDS ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಯ್ತು ಅಚ್ಚರಿ ಮೂಡಿಸುವ ಉತ್ತರ| ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುವುದೇನು?| ಸೋಶಿಯಲ್ ಮೀಡಿಯಾದಿಂದ ದೂರವಿರುವವರ ಅಭಿಪ್ರಾಯವೇನು?| ಅತಿ ಹೆಚ್ಚು ರಾಷ್ಟ್ರಭಕ್ತಿ ಹೊಂದಿರುವವರು ಮುಸ್ಲಿಮರೇ?| ಇಲ್ಲಿದೆ ಅಧ್ಯಯನದಲ್ಲಿ ಕಂಡುಕೊಂಡ ವಾಸ್ತವಾಂಶ

ನವದೆಹಲಿ[ಜೂ.13]: ಭಾರತ ಕೇವಲ ಹಿಂದೂಗಳಿಗೆ ಸೀಮಿತವೇ? ಈ ವಿಚಾರದ ಮೇಲೆ ಅಧ್ಯಯನ ನಡೆದಿದ್ದು, ಕುತೂಹಲಕಾರಿ ಉತ್ತರ ಲಭಿಸಿದೆ. ಸೆಂಟರ್ ಆಫ್ ಸ್ಟಡೀಸ್ ಆಫ್ ಡೆವಲಪಿಂಗ್ ಸೊಸೈಟೀಸ್(CSDS) ಸೋಶಿಯಲ್ ಮೀಡಿಯಾಗೆ ಸಂಬಂಧಿಸಿದಂತೆ ನೂತನ ಅಧ್ಯಯನವೊಂದನ್ನು ನಡೆಸಿದೆ. ಈ ಅಧ್ಯಯನದಲ್ಲಿ ಫೇಸ್ ಬುಕ್, ವಾಟ್ಸಾಪ್, ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಬಳಕೆದಾರರನ್ನು ಶಾಮೀಲು ಮಾಡಲಾಗಿದೆ. 

CSDS ತನ್ನ ಅಧ್ಯಯನದಲ್ಲಿ ಕಳೆದ 5 ವರ್ಷಗಳ ಅಂಕಿ ಅಂಶಗಳನ್ನು ಬಳಸಿಕೊಂಡಿದೆ. ಈ ಅಧ್ಯಯನದಲ್ಲಿ ದಿನನಿತ್ಯ, ಸಾಪ್ತಾಹಿಕ ಹಾಗೂ ಅಪರೂಪಕ್ಕೊಮ್ಮೆ ಸೋಶಿಯಲ್ ಮೀಡಿಯಾ ಬಳಸುವ ಗ್ರಾಹಕರ ಅಭಿಪ್ರಾಯವನ್ನು ಕಲೆ ಹಾಕಲಾಗಿದೆ. ಇದನ್ನು ಹೊರತುಪಡಿಸಿ ಸಾಮಾಜಿಕ ಜಾಲತಾಣಗಳನ್ನು ಬಳಸದವರ ಅಭಿಪ್ರಾಯವನ್ನೂ ಪಡೆಯಲಾಗಿದೆ. ಈ ಎಲ್ಲಾ ಅಭಿಪ್ರಾಯಗಳನ್ನು ಒಟ್ಟುಗೂಡಿಸಿದಾಗ ಶೇ. 73ರಷ್ಟು ಜನರು ಭಾರತದಲ್ಲಿ ಎಲ್ಲಾ ಧರ್ಮಗಳು ಸಮಾನ ಎಂಬ ಅಭಿಪ್ರಾಯ ಹೊಂದಿದ್ದಾರೆ. ಇನ್ನುಳಿದವರು ಭಿನ್ನವಾದ ಉತ್ತರ ನೀಡಿದ್ದಾರೆ. ಅಪರೂಪಕ್ಕೊಮ್ಮೆ ಸೋಶಿಯಲ್ ಮೀಡಿಯಾ ಬಳಸುವವರಲ್ಲಿ ಅಧಿಕ ಮಂದಿ ಭಾರತ ಹಿಂದೂ ರಾಷ್ಟ್ರವೆಂಬ ಅಭಿಪ್ರಾಯ ಹೊಂದಿದ್ದಾರೆ.

ದೇಶದಲ್ಲಿ ಹಿಂದೂ ಪ್ರಭಾವ ಜಾಸ್ತಿ ಇದೆ

ಮಂಗಳವಾರದಂದು ಬಹಿರಂಗವಾದ CSDS ವರದಿಯನ್ವಯ ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಶೇ. 19ರಷ್ಟು ಮಂದಿ ಮಾತ್ರ ಭಾರತ ಕೇವಲ ಹಿಂದೂಗಳ ರಾಷ್ಟ್ರವೆಂಬ ಅಭಿಪ್ರಾಯ ಹೊಂದಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾ ಬಳಸದಿರುವ ಶೇ. 17ರಷ್ಟು ಮಂದಿ ಕೂಡಾ ಇದೇ ಅಭಿಪ್ರಾಯ ಹೊಂದಿದ್ದಾರೆ. ಇವರ ಅನ್ವಯ ಭಾರತದಲ್ಲಿ ಹಿಂದೂಗಳ ಪ್ರಭಾವ ಜಾಸ್ತಿ ಇದೆಯಂತೆ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಎಲ್ಲಾ ಧರ್ಮಗಳು ಸಮಾನ

ಸೋಶಿಯಲ್ ಮಿಡಿಯಾ ಬಳಸದ ಶೇ. 73ರಷ್ಟು ಮಂದಿ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಎಲ್ಲಾ ಧರ್ಮಗಳು ಸಮಾನ ಎಂದಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಶೇ. 75ರಷ್ಟು ಮಂದಿಯೂ ಇದೇ ಅಭಿಪ್ರಾಯ ಹೊಂದಿದ್ದಾರೆ.

ಮುಸ್ಲಿಮರಲ್ಲಿ ಅತಿ ಹೆಚ್ಚು ರಾಷ್ಟ್ರಭಕ್ತಿ

ಅಧ್ಯಯನದಲ್ಲಿ ಪಾಲ್ಗೊಂಡ ಸೋಶಿಯಲ್ ಮೀಡಿಯಾದ ಹಿಂದೂ ಬಳಕೆದಾರರು ಮುಸ್ಲಿಮರಲ್ಲಿ ಅತಿ ಹೆಚ್ಚು ರಾಷ್ಟ್ರಪ್ರೇಮ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!