TikTok ಗೀಳಿಗೆ ಪ್ರಾಣ ಬಿಟ್ಟ ಮಹಿಳೆ: ಟಿಕ್‌ ಟಾಕ್‌ನಲ್ಲಿ ವಿಡಿಯೋ ಅಪ್ಲೋಡ್

Published : Jun 13, 2019, 04:12 PM ISTUpdated : Jul 15, 2019, 11:55 AM IST
TikTok ಗೀಳಿಗೆ ಪ್ರಾಣ ಬಿಟ್ಟ ಮಹಿಳೆ: ಟಿಕ್‌ ಟಾಕ್‌ನಲ್ಲಿ ವಿಡಿಯೋ ಅಪ್ಲೋಡ್

ಸಾರಾಂಶ

ಟಿಕ್ ಟಾಕ್ ಮಾಡುವುದು ಈಗಿನ ಫ್ಯಾಶನ್ ಆಗ್ಬಿಟ್ಟಿದೆ. ದೊಡ್ಡವರಿಂದ ಹಿಡಿದು ಚಿಕ್ಕವರತನಕ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಕೆಲವರಂತೂ ಟಿಕ್‌ ಟಾಕ್‌ಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗ್ಬಿಟ್ಟಿದ್ದಾರೆ. ಅದು ಯಾವ ಮಟ್ಟಿಗೆ ಅಂದ್ರೆ ಪ್ರಾಣ ಕಳೆದುಕೊಳ್ಳವ ತನಕ.

ಚೆನ್ನೈ, (ಜೂ.13): ಕೆಲಸ-ಬೊಗಸೆ ಬಿಟ್ಟು ಮೂರು ಹೊತ್ತು ಟಿಕ್ ಟಾಕ್ ವಿಡಿಯೋ ಮಾಡುತ್ತಾ ಅದರಲ್ಲೇ ಮುಳುಗಿರ್ತೀಯ ಎಂದು ಪತಿ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್​ನಲ್ಲಿ ನಡೆದಿದೆ. 

ಪೆರಂಬೂರ್​ ಮೂಲದ ಅನಿತಾ(24) ಎಂಬಾಕೆ ಇಂದು (ಗುರುವಾರ) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಅನಿತಾ, ಪಳನಿವೇಲ್ ಎಂಬುವರೊಂದಿಗೆ ವಿವಾಹವಾಗಿದ್ದು, 4 ವರ್ಷದ ಹೆಣ್ಣು ಮಗಳು ಹಾಗೂ 2 ವರ್ಷದ ಗಂಡು ಮಗುವಿದೆ.

ಟಿಕ್‌ಟಾಕ್‌ ನಿಷೇಧ; ದಿನಕ್ಕೆ 3.50 ಕೋಟಿ ನಷ್ಟ: 250 ಮಂದಿ ಹುದ್ದೆ ಸಂಕಷ್ಟಕ್ಕೆ!

ಅನಿತಾ ನಿತ್ಯ ಮನೆ ಕೆಲಸವನ್ನೆಲ್ಲ ಬಿಟ್ಟು ಬರೀ ಮೊಬೈಲ್ ಹಿಡಿದುಕೊಂಡು ಟಿಕ್ ಟಾಕ್ ವಿಡಿಯೋ ಮಾಡುತ್ತಾ ಅಪ್ ಲೋಡ್ ಮಾಡುತ್ತಾ ಕಾಲಕಳೆಯುತ್ತಿದ್ದಳು.

ಇದನ್ನು ನೋಡುವಷ್ಟು ನೋಡಿದ ಪತಿ,  ಅನಿತಾಳಿಗೆ ಬೈದು ಮೊಬೈಲ್ ಒಡೆದು ಹಾಕುವುದಾಗಿ ಎಚ್ಚರಿಸಿದ್ದಾನೆ. ಇದರಿಂದ ಮನನೊಂದ ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ನನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಆತ್ಮಹತ್ಯೆಗೂ ಮುನ್ನ ತನ್ನ ಹೇಳಿಕೆಯನ್ನು ವಿಡಿಯೋ ಮಾಡಿ ಟಿಕ್‌ ಟಾಕ್‌ನಲ್ಲಿ  ಹಾಕಿದ್ದಾಳೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?