ಮೋದಿ ನೇತೃತ್ವದಲ್ಲಿ 2019ರ ಚುನಾವಣೆ ಸ್ಪರ್ಧೆ: ಎನ್‌ಡಿಎ

By Suvarna Web DeskFirst Published Apr 11, 2017, 2:07 AM IST
Highlights

ಮೋದಿ ಅವರು 34 ಎನ್‌ಡಿಎ ಅಂಗಪಕ್ಷಗಳಿಗೆ ಸಂಜೆ ಔತಣ ನೀಡಿದರು. ಈ ವೇಳೆ ಮೋದಿ ನಾಯಕತ್ವ ಶ್ಲಾಘಿಸಿದ ಸಭೆ, ಮುಂದಿನ ಮಹಾಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುವ ಬಗ್ಗೆ ನಿರ್ಧರಿಸಿತು ಎಂದು ಸಚಿವ ಅರುಣ್‌ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

ನವದೆಹಲಿ: 2019ರ ಲೋಕಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲೇ ಎದುರಿಸುವ ಬಗ್ಗೆ ಎನ್‌ಡಿಎ ಅಂಗಪಕ್ಷಗಳ ಸಭೆ ಸೋಮವಾರ ನಿರ್ಧರಿಸಿದೆ.

ಮೋದಿ ಅವರು 34 ಎನ್‌ಡಿಎ ಅಂಗಪಕ್ಷಗಳಿಗೆ ಸಂಜೆ ಔತಣ ನೀಡಿದರು. ಈ ವೇಳೆ ಮೋದಿ ನಾಯಕತ್ವ ಶ್ಲಾಘಿಸಿದ ಸಭೆ, ಮುಂದಿನ ಮಹಾಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸುವ ಬಗ್ಗೆ ನಿರ್ಧರಿಸಿತು ಎಂದು ಸಚಿವ ಅರುಣ್‌ ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಅಜೆಂಡಾದಲ್ಲಿ ಇರಲಿಲ್ಲ ಎಂದು ಜೇಟ್ಲಿ ಹೇಳಿದರು. ಆದರೆ ಮೂಲಗಳ ಪ್ರಕಾರ ಒಮ್ಮತದ ಅಭ್ಯರ್ಥಿಗೆ ಸಭೆ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ಯಾವತ್ತೂ ಮೋದಿ ಟೀಕಿಸುವ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸಭೆಗೆ ಬಂದಿದ್ದು ವಿಶೇಷವಾಗಿತ್ತು.

ತಣ್ಣಗಾಯ್ತು ಶಿವಸೇನೆ:

ಈವರೆಗೆ ಒಂದೇ ವೇದಿಕೆಯಲ್ಲಿ ಅಪರೂಪಕ್ಕೆ ಕಾಣಿಸಿಕೊಂಡರೂ ಶಿವಸೇನೆ ನೇತಾರ ಉದ್ಧವ್‌ ಠಾಕ್ರೆ ಮತ್ತು ಪ್ರಧಾನಿ ಮೋದಿ ಮುಖಕೊಟ್ಟು ಮಾತಾಡುತ್ತಿರಲಿಲ್ಲ. ಆದರೆ 3 ವರ್ಷದಲ್ಲಿ ಮೊದಲ ಬಾರಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೇ ಠಾಕ್ರೆಗೆ ಕರೆ ಮಾಡಿ ಸಭೆಗೆ ಬರುವಂತೆ ಆಹ್ವಾನಿಸಿದರು. ಇದರಿಂದ ತೃಪ್ತರಾದ ಉದ್ಧವ್‌ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಗೇ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ' ವರದಿ ತಿಳಿಸಿದೆ.

ಈ ಹಿಂದೆ ಶಿವಸೇನೆ ರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ಸಿನ ಪ್ರತಿಭಾ ಪಾಟೀಲ್‌ರನ್ನು ಬೆಂಬಲಿಸಿ ಎನ್‌ಡಿಎ ವಿರೋಧಿ ನಿಲುವು ತಳೆದಿತ್ತು.

click me!