
ಮಂಗಳೂರು (ಜ.16): ಶಿರಾಡಿ ಅರಣ್ಯದಲ್ಲಿ ನಕ್ಸಲ್ ಚಲನವಲನ ಕಂಡು ಬಂದಿರುವ ವಿಚಾರದ ಹಿಂದೆ ಹತ್ಯೆ ಸಂಚಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಮಾಹಿತಿದಾರ ರಿಜುವನ್ನು ಹತ್ಯೆ ಮಾಡುವ ಸಲುವಾಗಿ ಹುಡುಕಿಕೊಂಡು ಬಂದಿದ್ದರು ಎನ್ನಲಾಗಿದೆ.
ಮಿತ್ತಮಜಲು ನಿವಾಸಿ ಹಾಗೂ ಆಂಬುಲೆನ್ಸ್ ಚಾಲಕ, ಹೋಂಗಾರ್ಡ್ ಆಗಿರುವ ರಿಜು ಬಗ್ಗೆ ಸುರೇಶ್ ಎನ್ನುವವರ ಬಳಿ ಮಾಹಿತಿ ಕೇಳಿದ್ದರು ಎನ್ನಲಾಗಿದೆ.
2012ರಲ್ಲಿ ಒಬ್ಬ ನಕ್ಸಲ್’ನನ್ನು ಎನ್’ಕೌಂಟರ್ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಸುಬ್ರಮಣ್ಯದ ಅರಣ್ಯದಲ್ಲಿ ಈ ಎನ್’ಕೌಂಟರ್ ನಡೆಸಲಾಗಿತ್ತು. ಈ ವೇಳೆ ರಿಜುವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದ್ದರಿಂದ ಅವರನ್ನು ಹುಡುಕಿಕೊಂಡು ಬಂದಿದ್ದಾಗಿ ಸುರೇಶ್ ಎನ್ನುವವರ ಬಳಿ ನಕ್ಸಲರು ಹೇಳಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.