
ಬೆಂಗಳೂರು (ಜ.16): ಬಹುತೇಕ ಸರ್ವೇಗಳು ಅತಂತ್ರ ವಿಧಾನಸಭೆ ಆಗಬಹುದು ಎಂದು ಹೇಳುತ್ತಿದ್ದಂತೆ, ಕಾಂಗ್ರೆಸ್ ಹೈಕಮಾಂಡ್ ಗೆಲ್ಲುವ ಅಭ್ಯರ್ಥಿಗೆ ಗಾಳ ಹಾಕಿ ಕರೆದುಕೊಂಡು ಬನ್ನಿ, ಟಿಕೆಟ್ ಕೊಡೋಣ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಹೇಳಿದೆಯಂತೆ.
ಯಾವುದೇ ಪಕ್ಷದಿಂದ ನಿಂತರೂ ಗೆಲ್ಲುವ ಅಭ್ಯರ್ಥಿಯನ್ನು ಕರೆದು ಕೊಂಡು ಬಂದರೆ - ಒಂದು: ವಿಪಕ್ಷಗಳ ಸಂಖ್ಯೆ ಕಡಿಮೆ ಮಾಡಬಹುದು. ಎರಡು: ಅತಂತ್ರದಿಂದ ನೂರರ ಹತ್ತಿರ ಹತ್ತಿರ ಹೋಗಬಹುದು. ಕೂಡ್ಲಿಗಿ ನಾಗೇಂದ್ರ ಈಗಾಗಲೇ ಬರಲು ತಯಾರಾಗಿದ್ದು, ಆನಂದ್ ಸಿಂಗ್ ಪಕ್ಷೇತರವಾಗಿ ನಿಲ್ಲಬೇಕೋ ಕಾಂಗ್ರೆಸ್‌ಗೆ ಬರಬೇಕೋ ಇನ್ನೂ ತೀರ್ಮಾನ ಮಾಡಿಲ್ಲವಂತೆ.
ಕಾಂಗ್ರೆಸ್ ನಾಯಕರು ಹೇಳುವ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಒಂದಿಷ್ಟು ಸಂಚಲನ ಆಗಬಹುದು, ಹೇಳುತ್ತೇವೆ ಕಾಯಿರಿ ಎನ್ನುತ್ತಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಕೊನೆಯ ಒಂದು ತಿಂಗಳು ಅಮಿತ್ ಶಾ ಕೂಡ ಇದನ್ನೇ ಮಾಡಬಹುದು ಎಂಬ ಆತಂಕ ಕೂಡ ಇದ್ದೇ ಇದೆ. ಅತಂತ್ರದಿಂದ ಬಹುಮತದತ್ತ ದಾಪುಗಾಲು ಎಂದು ಪಕ್ಷಗಳು ಹೇಳುವುದೆಂದರೆ ಹೊಸ ಮೀನುಗಳಿಗೆ ಗಾಳ ಹಾಕುವುದೇ ಇರಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.