ಕೊರಗಜ್ಜನ ಪವಾಡ ! ಆಭರಣ ಕದ್ದ ಕಳ್ಳರು ವರ್ಷದ ನಂತರ ಹಿಂತಿರುಗಿಸಿದರು

By Suvarna Web DeskFirst Published Jan 16, 2018, 1:51 PM IST
Highlights

, ಕಳೆದ ವರುಷ ಅಕ್ಟೋಬರ್ 2 ರ ರಾತ್ರಿ ಇಲ್ಲಿ ಕಳವು ನಡೆದಿತ್ತು. ಅದಾಗ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಮುಂದಿನ ಮಕರ ಸಂಕ್ರಮಣದೊಳಗಾಗಿ ಕದ್ದ ಆಭರಣ ದೈವಸ್ಥಾನ ಸೇರಲಿದೆ ಎನ್ನು ವಿಶ್ವಾಸವನ್ನು ಕೊರಗಜ್ಜ ನೀಡಿದ್ದ.

ಉಡುಪಿ(ಜ.16): ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ ಎಂತವನೂ ಕೇಡು ಬಗೆಯಲು ಮುಂದಾಗೋದಿಲ್ಲ. ಒಂದು ವೇಳೆ ಕೇಡು ಬಗೆದಲ್ಲಿ ದೈವ ಶಕ್ತಿಗಳು ಆತನನ್ನು ಮಟ್ಟ ಹಾಕುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಉಡುಪಿಯ ಕಟಪಾಡಿಯ ಏಣಗುಡ್ಡೆ ಎಂಬಲ್ಲಿರೋ ನೀಚ ದೈವ ಅಥವಾ ಕರಾವಳಿಯಾದ್ಯಂತ ಅಜ್ಜ ಎಂದೇ ಗುರುತಿಸಿಕೊಂಡಿರುವ ಸ್ವಾಮಿ ಕೊರಗಜ್ಜನ ಆಭರಣಗಳನ್ನು ಕದ್ದೊಯ್ದಿದ್ದ ಕಳ್ಳನೊಬ್ಬ ತಾನಾಗಿಯೇ ಮಕರ ಸಂಕ್ರಮಣ ದಿನದಂದು ಕೆಲವೊಂದು ಬೆಳ್ಳಿ ಆಭರಣಗಳನ್ನು ತಂದು ದೈವಸ್ಥಾನದ ಬಾಗಿಲ ಬಳಿ ಎಸೆದು ಹೋಗಿದ್ದಾನೆ.

ಪವಾಡ ಅಂದರೆ, ಕಳೆದ ವರುಷ ಅಕ್ಟೋಬರ್ 2 ರ ರಾತ್ರಿ ಇಲ್ಲಿ ಕಳವು ನಡೆದಿತ್ತು. ಅದಾಗ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಮುಂದಿನ ಮಕರ ಸಂಕ್ರಮಣದೊಳಗಾಗಿ ಕದ್ದ ಆಭರಣ ದೈವಸ್ಥಾನ ಸೇರಲಿದೆ ಎನ್ನು ವಿಶ್ವಾಸವನ್ನು ಕೊರಗಜ್ಜ ನೀಡಿದ್ದ. ಇದೀಗ ಆ ಮಾತು ನಿಜವಾಗಿದ್ದು. ನಿನ್ನೆ ಮಕರ ಸಂಕ್ರಮಣದ ದಿನ ಕದ್ದ ಕೆಲವು ಬೆಳ್ಳಿ ಆಭರಣಗಳು ದೈವಸ್ಥಾನ ಸೇರಿವೆ. ನಿನ್ನೆ ಖದೀಮರು ದೈವಸ್ಥಾನದ ಬಾಗಿಲ ಬಳಿ ತಂದಿಟ್ಟು ಹೋಗಿದ್ದು, ಕೊರಗಜ್ಜನ ಮಹಿಮೆಗೆ ಕೈಗನ್ನಡಿ ಹಿಡಿದಂತಾಗಿದೆ.

ಸದ್ಯ ತಂದಿಟ್ಟ ಬೆಳ್ಳಿಯ ಪರಿಕರಗಳು ಕಾಪು ಠಾಣಾ ಪೊಲೀಸರ ವಶದಲ್ಲಿದೆ. ಇನ್ನೂ ಒಂದಿಷ್ಟು ಆಭರಣಗಳು ಬಾಕಿ ಇದ್ದು ಅದನ್ನೂ ಕದ್ದೊಯ್ದ ಕಳ್ಳರು ತಂದಿಡುವ ವಿಶ್ವಾಸವನ್ನು ಗ್ರಾಮಸ್ಥರು ಹೊಂದಿದ್ದಾರೆ.

click me!