ರಾಜಧಾನಿ ಬೆಂಗಳೂರಿಗೂ ಅಂಟಿತೆ ನಕ್ಸಲ್ ನಂಟು?

First Published Jun 13, 2018, 2:26 PM IST
Highlights

ಬೆಂಗಳೂರು ಮೂಲದ ಶಂಕತ ನಕ್ಸಲ್ ವೊಬ್ಬನ್ನನ್ನು ಛತ್ತೀಸ್ ಗಢ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಟೆಕ್ಕಿ ದೇವದಾಸ್ ನಾಯಕ್ ಬಂಧಿತ ಶಂಕಿತ. ಬಂಧಿತ ಆರೋಪಿಯಿಂದ ನಕ್ಸಲ್ ಚಟುವಟಿಕೆಗಳಿಗೆ ಬಳಸುತ್ತಿದ್ದ ವಸ್ತುಗಳ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿವವರಕ್ಕೆ ಮುಂದೆ ಓದಿ..

ಬೆಂಗಳೂರು ಜೂನ್ 13:  ಬೆಂಗಳೂರು ಮೂಲದ ಶಂಕತ ನಕ್ಸಲ್ ಒಬ್ಬನ್ನನ್ನು ಛತ್ತೀಸ್ ಗಢ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ಸಾಮಾಝಿಕ ತಾಣದಲಲ್ಲಿ ಸಕ್ರಿಯವಾಗಿ ನಕ್ಸಲ್ ವಿಚಾರ ಹರಿಬಿಡುತ್ತಿದ್ದ ಟೆಕ್ಕಿ ದೇವದಾಸ್ ನಾಯಕ್ ಬಂಧಿತ ಶಂಕಿತ.

ಬಂಧಿತ ಆರೋಪಿಯಿಂದ  ನಕ್ಸಲ್ ಚಟುವಟಿಕೆಗಳಿಗೆ ಬಳಸುತ್ತಿದ್ದ ವಸ್ತುಗಳ ವಶಕ್ಕೆ ಪಡೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವುದರ ಜತೆಗೆ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ  ಸೋಮಸೇನ್  ಜತೆಯೂ ದೇವದಾಸ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಕ್ಸಲರ ಸಂಚು!

ಈ ಮೊದಲು ಮಾಹಿತಿ ಕಲೆ ಹಾಕಿದ ಛತ್ತೀಸ್ ಗಡ ಪೊಲೀಸರು ಆರೋಪಿ ಅಭಯ್ ದೇವದಾಸ್ ನನ್ನ ಬಂಧಿಸಲು ಬೆಂಗಳೂರಿನ ಮನೆ ಮೇಲೆ ದಾಳಿ ಮಾಡಿದ್ದರು. ಆದರೆ ದೇವದಾಸ್ ಸಿಕ್ಕಿರಲಿಲ್ಲ. ಆರೋಪಿ ಮನೆಯಿಂದ ನಕ್ಸಲ್ ಚಟುವಟಿಕೆಗಳಿಗೆ ಸಂಬಂಧಪಟ್ಟ  ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಆರೋಪಿ 15ಕ್ಕೂ ಅಧಿಕ ದೇಶಗಳನ್ನು ಸುತ್ತಿದ್ದು ನಕ್ಸಲ್ ಗೆ ಸಂಬಂಧಿಸಿದ ವಿಚಾರಗಳನ್ನು ನಿರಂತರವಾಗಿ ಸಾಮಾಜಿಕ ತಾಣದಲ್ಲಿ ಪ್ರಚೋದನಕಾರಿಯಾಗಿ ಬಿಂಬಿಸುವ ಯತ್ನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟ ಪ್ರತಿಕ್ರಿಯೆ ನೀಡಲು ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ನಿರಾಕರಿಸಿದ್ದಾರೆ.

click me!