ನವವೃಂದಾವನ ಪೂಜೆ: ಹೈಕೋರ್ಟ್ ಗೇ ಹೋಗಿ ಎಂದ ಸುಪ್ರೀಂ!

By Web DeskFirst Published Sep 26, 2018, 4:18 PM IST
Highlights

ನವವೃಂದಾವನ ಪೂಜೆ ವಾರಸತ್ವ ಪ್ರಕರಣ! ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವವೃಂದಾವನ! ನವವೃಂದಾವನದ ಧಾರ್ಮಿಕ ವಾರಸತ್ವಕ್ಕೆ ನಡೆಯುತ್ತಿದ್ದ ಜಟಾಪಟಿ! ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ, ಉತ್ತರಾದಿ ಮಠದ ಜಗಳ! ಪೂಜೆಯ ಹಕ್ಕನ್ನು ಕೋರಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದ ಉಭಯ ಮಠಗಳು! ಸಮಸ್ಯೆಯನ್ನು ಹೈಕೋರ್ಟ್​​ನಲ್ಲೇ ಬಗೆಹರಿಸಿಕೊಳ್ಳಲು ಸೂಚಿಸಿದ ಸುಪ್ರೀಂ ಕೋರ್ಟ್​

ನವದೆಹಲಿ(ಸೆ.26): ಮಹತ್ವದ ಬೆಳವಣಿಗೆಯೊಂದರಲ್ಲಿ ನವವೃಂದಾವನ ಪೂಜೆ ವಾರಸತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಸಮಸ್ಯೆಯನ್ನು ಹೈಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳುವಂತೆ ಉಭಯ ಅರ್ಜಿದಾರರಿಗೂ ಸೂಚಿಸಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವವೃಂದಾವನದಲ್ಲಿ ಧಾರ್ಮಿಕ ವಾರಸತ್ವಕ್ಕೆ ಜಟಾಪಟಿ ನಡೆಯುತ್ತಿತ್ತು. ಧಾರ್ಮಿಕ ವಾರಸತ್ವಕ್ಕಾಗಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾದಿ ಮಠ ಕೋರ್ಟ್ ಮೆಟ್ಟಿಲೇರಿದ್ದವು.

ಧಾರ್ಮಿಕ ವಾರಸತ್ವದ ಪೂಜೆಯ ಹಕ್ಕನ್ನು ಕೋರಿ ಉಭಯ ಮಠಗಳು ಸುಪ್ರೀಂ ಮೊರೆ ಹೋಗಿದ್ದವು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಹೈಕೋರ್ಟ್ ನಲ್ಲೇ ಇತ್ಯರ್ಥಪಡಿಸಿಕೊಳ್ಳಿ ಎಂದು ಸೂಚಿಸಿದೆ.

click me!