ಈ ಐದು ರಾಜ್ಯಗಳಲ್ಲಿ ಇನ್ನು ಬದಲಾಗಲ್ಲ ಪೆಟ್ರೋಲ್, ಡೀಸೆಲ್ ದರ

By Web DeskFirst Published Sep 26, 2018, 3:45 PM IST
Highlights

ದೇಶದಲ್ಲಿ ದಿನದಿಂದ ದಿನಕ್ಕೆ ತೈಲ ದರದಲ್ಲಿ ಏರಿಕೆಯಾಗುತ್ತಲೇ ಸಾಗಿದ್ದು ಇದು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಆದರೆ ಇದೇ ವೇಳೆ ಉತ್ತರ ರಾಜ್ಯಗಳ ಹಣಕಾಸು ಸಚಿವರುಗಳು ಸಭೆ ನಡೆಸುವ ಮೂಲಕ ಒಂದೇ ದರ ಕಾಯ್ದುಕೊಳ್ಳಲು ನಿರ್ಧಾರ ಮಾಡಿವೆ. 

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ದಿನಕ್ಕೆ ಪೆಟ್ರೋಲ್ ದರ ಏರಿಕೆಯಾಗುತ್ತಲೇ ಸಾಗಿ ಜನರನ್ನು ಆತಂಕಕ್ಕೆ ದೂಡುತ್ತಿದೆ. 

ಇದೇ ವೇಳೆ ದೇಶದ ಐದು ರಾಜ್ಯಗಳು ಏಕ ರೀತಿಯ ತೈಲ ದರವನ್ನು ಜಾರಿಗೆ ತರಲು  ನಿರ್ಧಾರ ಮಾಡಿಕೊಂಡಿವೆ.

ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ನವದೆಹಲಿಯಲ್ಲಿ ಮೂರು ಪಕ್ಷಗಳು ಆಡಳಿತ ನಡೆಸುತ್ತಿವೆ. ಕಾಂಗ್ರೆಸ್, ಆಪ್, ಬಿಜೆಪಿ ಆಡಳಿತದಲ್ಲಿದ್ದು,  ಏಕ ರೀತಿಯ ದರವನ್ನು ಕಾಯ್ದುಕೊಳ್ಳಲು ಸಭೆ ನಡೆಸುವ ಮೂಲಕ ನಿರ್ಧಾರ ಮಾಡಿವೆ. 

ಒಂದು ದೇಶ ಒಂದು ಟ್ಯಾಕ್ಸ್ ಎನ್ನುವಂತೆ ಮಂಗಳವಾರ ಈ ಬಗ್ಗೆ ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಸಭೆಯೊಂದನ್ನು ನಡೆಸುವ ಮೂಲಕ ಏಕ ರೀತಿಯ ದರವನ್ನು ಜಾರಿ ಮಾಡಲು ನಿರ್ಧಾರ ಮಾಡಿದ್ದಾರೆ.  

ದಿಲ್ಲಿಯಂತೆಯೇ ಎಕ್ಸೈಸ್ ಪಾಲಿಸಿಯನ್ನು ಜಾರಿ ತರುವ ಮೂಲಕ ಈಶಾನ್ಯ ರಾಜ್ಯಗಳಲ್ಲಿ  ಮದ್ಯಕ್ಕೂ ಕೂಡ ಒಂದೇ ರೀತಿಯ ದರವನ್ನು ವಿಧಿಸುವ ಬಗ್ಗೆ ಈ ವೇಳೆ ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.

click me!