ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಫೋನ್'ನಲ್ಲಿ ತಲಾಖ್ ಹೇಳಿದ ಪತಿ : ಅಸಲಿಗೆ ಈಕೆ ಯಾರು ಗೊತ್ತೆ ?

Published : Apr 22, 2017, 11:25 PM ISTUpdated : Apr 11, 2018, 12:53 PM IST
ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಫೋನ್'ನಲ್ಲಿ ತಲಾಖ್ ಹೇಳಿದ ಪತಿ : ಅಸಲಿಗೆ ಈಕೆ ಯಾರು ಗೊತ್ತೆ ?

ಸಾರಾಂಶ

ಆಗ್ರದ ಸಮೀಪ ಇದೇ ರೀತಿಯ ಘಟನೆ ನಡೆದಿದ್ದು ಅವಳಿಜವಳಿ ಹೆಣ್ಣುಮಕ್ಕಳನ್ನು ಹಡೆದಿದ್ದಕ್ಕೆ 22 ವರ್ಷದ ಅಫ್ರಿನ್ ಮಹಿಳೆಗೆ ಪತಿಯೊಬ್ಬ ಮೊಬೈಲ್ ಮೂಲಕ ತಲಾಖ್ ಹೇಳಿದ್ದಾನೆ. ಅಫ್ರಿನ್ ಒಂದು ವರ್ಷದ ಹಿಂದಷ್ಟೆ  ಮದುವೆಯಾಗಿದ್ದಳು. ಗಂಡನಿಂದ ಅನ್ಯಾಯಕ್ಕೊಳಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಪೋಷಕರ ಮನೆಯಲ್ಲಿರಬೇಕಾಗಿದೆ.    

ನವದೆಹಲಿ(ಏ.23): ಹೆಂಡತಿ ಹೆಣ್ಣು ಮಗುವಿಗೆರ ಜನ್ಮ ನೀಡಿದ್ದಕ್ಕೆ ಕೋಪಗೊಂಡ ಪತಿ ಮಹರಾಯನೊಬ್ಬ ಪತ್ನಿಗೆ ಫೋನಿನಲ್ಲಿಯೇ ತಲಾಖ್ ಹೇಳಿ ವಿಚ್ಚೇದನ ನೀಡಿರುವ ಘಟನೆ ಉತ್ತರ ಪ್ರದೇಶದ ಆಗ್ರ ಸಮೀಪದ ಅಮ್ರೋಹಾ ಎಂಬಲ್ಲಿ ನಡೆದಿದೆ.

ಸುಮಾಲಿಯಾ ಜಾವೇದ್  ಗಂಡನಿಂದ ವಿಚ್ಚೇದನಕ್ಕೊಳಗಾಗಿರುವ ಮಹಿಳೆ. ಅಸಲಿಗೆ ಈಕೆ ರಾಷ್ಟ್ರಮಟ್ಟದ ಬ್ಯಾಸ್ಕೆಟ್ ಬಾಲ್ ಆಟಗಾರ್ತಿಯಾಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾಳೆ. ತಾಯಿ ಮನೆಯಲ್ಲಿರುವ ಈಕೆ ಈ ವಿಷಯದ ಕುರಿತಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಗಂಡನಿಂದ ಆಗಿರುವ ಅನ್ಯಾಯದ ವಿರುದ್ಧ ದೂರು ಸಲ್ಲಿಸುವ ಇಚ್ಚೆ ಹೊಂದಿದ್ದಳೆ.

ಇದೇ ರೀತಿ ಘಟಿಸಿವೆ ಹಲವು ಘಟನೆಗಳು

ಆಗ್ರದ ಸಮೀಪ ಇದೇ ರೀತಿಯ ಘಟನೆ ನಡೆದಿದ್ದು ಅವಳಿಜವಳಿ ಹೆಣ್ಣುಮಕ್ಕಳನ್ನು ಹಡೆದಿದ್ದಕ್ಕೆ 22 ವರ್ಷದ ಅಫ್ರಿನ್ ಮಹಿಳೆಗೆ ಪತಿಯೊಬ್ಬ ಮೊಬೈಲ್ ಮೂಲಕ ತಲಾಖ್ ಹೇಳಿದ್ದಾನೆ. ಅಫ್ರಿನ್ ಒಂದು ವರ್ಷದ ಹಿಂದಷ್ಟೆ  ಮದುವೆಯಾಗಿದ್ದಳು. ಗಂಡನಿಂದ ಅನ್ಯಾಯಕ್ಕೊಳಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಪೋಷಕರ ಮನೆಯಲ್ಲಿರಬೇಕಾಗಿದೆ.    

ದೆಹಲಿಯ ರೈಲ್ವೆ ಉದ್ಯೋಗಿಯಾಗಿದ್ದ ರಿಜ್ವಾನ್ ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ವರನನ್ನು 2012ರಲ್ಲಿ ಮದುವೆಯಾಗಿದ್ದಳು. ಈ ಮೊದಲೇ ಈತ 2 ವಿವಾಹವಾಗಿರುವುದು ಗೊತ್ತಾದ ಮೇಲೆ ಈಕೆ ಆತನ ವಿರುದ್ಧ ವಿಚ್ಚೇದನಕ್ಕೆ ಅರ್ಜಿ ಕೋರಿದಳು.ಇದೇ ರೀತಿ ಹಲವು ದೂರುಗಳು ದೇಶದಾದ್ಯಂತ ದಾಖಲಾಗುತ್ತಿವೆ.  ಇತ್ತೀಚಿನ ದಿನಗಳಲ್ಲಿ ವಾಟ್ಸ್'ಆ್ಯಪ್, ಫೇಸ್'ಬುಕ್'ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ತಲಾಖ್ ಹೇಳಲಾಗುತ್ತಿದೆ. ಆರ್ಥಿಕವಾಗಿ ಸ್ಥಿತವಂತರಲ್ಲದ ಮಹಿಳೆಯರು ತಲಾಖ್'ನಿಂದ  ಜೀವನಪರ್ಯಂತ ಕಷ್ಟ ಅನುಭವಿಸುವಂತಾಗಿದೆ.

ಸುಪ್ರೀಂ ಕೋರ್ಟ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ತಲಾಖ್'ನಿಂದಾಗುವ ತೊಂದರೆಗಳ ಬಗ್ಗೆ ದನಿ ಎತ್ತುತ್ತಲೆ ಇದ್ದು, ಇದಕ್ಕೆ ಕಾನೂನಿನ ಮೂಲಕ ಅಂತ್ಯ ಹಾಡಬೇಕಾಗಿದೆ ಎಂಬುದು ಇವರೆಲ್ಲರ ಏಕರೂಪವಾದ ಅಭಿಪ್ರಾಯವಾಗಿದೆ.  ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಹೇಳುವುದೇ ಬೇರೆ ಶರಿಯಾ ಕಾನೂನಿಗೆ ವಿರುದ್ಧವಾಗಿ ಪುರುಷರು ತಲಾಖ್ ನೀಡಿದರೆ ಮಹಿಳೆಯರು ಅದನ್ನು ಬಹಿಷ್ಕರಿಸಬಹುದು' ಎಂದು ತಿಳಿಸಿದೆ. ಆದರೆ ಕಾನೂನನ್ನು ಗೌರವಿಸದೆ ತಮಗೆ ಇಷ್ಟ ಬಂದ ರೀತಿ ತಲಾಖ್ ನೀಡುತ್ತಿರುವ ಪ್ರಕರಣಗಳು ಎಲ್ಲಡೆ ಹೆಚ್ಚಾಗುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!