ಪಾಕ್ ಹಂಗಾಮಿ ಪ್ರಧಾನಿಯಾಗಿ ನಾಸಿರುಲ್ ಮುಲ್ಕ್ ನೇಮಕ

First Published May 28, 2018, 3:54 PM IST
Highlights

ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾಸಿರುಲ್ ಮುಲ್ಕ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ ಹಂಗಾಮಿ ಪ್ರಧಾನಿಯಾಗಿ ಮುಲ್ಕ್ ಆಯ್ಕೆಯನ್ನು ಘೋಷಿಸಿದರು.

ಇಸ್ಲಾಮಾಬಾದ್(ಮೇ 28): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾಸಿರುಲ್ ಮುಲ್ಕ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ ಹಂಗಾಮಿ ಪ್ರಧಾನಿಯಾಗಿ ಮುಲ್ಕ್ ಆಯ್ಕೆಯನ್ನು ಘೋಷಿಸಿದರು.

ಹಂಗಾಮಿ ಪ್ರಧಾನಿ ಆಯ್ಕೆ ಸಂಬಂಧ ಪ್ರಧಾನಿ ಶಾಹಿದ್ ಖಾನ್‌ ಅಬ್ಬಾಸಿ ಹಾಗೂ ಪ್ರತಿಪಕ್ಷದ ನಾಯಕ ಖುರ್ಷಿದ್‌ ಶಾ ಅವರು ಆರು ಬಾರಿ ಸಭೆ ನಡೆಸಿದರೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ಅಂತಿಮವಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಮಾಡಲಾಗಿದೆ.

ಪಾಕಿಸ್ತಾನದಲ್ಲಿ ಜುಲೈ 25ರಂದು ನ್ಯಾಷನಲ್‌ ಅಸೆಂಬ್ಲಿ ಮತ್ತು ನಾಲ್ಕು ಪ್ರಾಂತ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೊಸ ಸರ್ಕಾರ ರಚನೆ ಆಗುವ ತನಕ ದೈನಂದಿನ ಆಡಳಿತದ ನಿರ್ವಹಣೆಗಾಗಿ ನಾಸಿರುಲ್ ಮುಲ್ಕ್ ಅವರನ್ನು ಹಂಗಾಮಿ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇನ್ನು ಶಾಹಿದ್‌ ಖಾನ್‌ ಅಬ್ಬಾಸಿ ನೇತೃತ್ವದ ಸರ್ಕಾರದ ಅವಧಿ ಮೇ 31ಕ್ಕೆ ಮುಗಿಯಲಿದೆ. 

click me!