ಓಖಿಯಿಂದ ಇಲ್ಲಿಗೆ ಶಾಪ - ದಿಲ್ಲಿಗೆ ವರ

By Suvarna Web DeskFirst Published Dec 7, 2017, 2:12 PM IST
Highlights

ದಕ್ಷಿಣದ ರಾಜ್ಯಗಳಲ್ಲಿ ಅನಾಹುತ ಸೃಷ್ಟಿಸಿದ ಬಳಿಕ ಮಹಾರಾಷ್ಟ್ರ ಮತ್ತು ಗುಜರಾತ್ ಮಾರ್ಗವಾಗಿ ಚಲಿಸಿದ ಓಖಿ ಚಂಡಮಾರುತ ಉತ್ತರಭಾರತದ ರಾಜ್ಯಗಳಿಗೆ ವರವಾಗುವ ಸಾಧ್ಯತೆ ಇದೆ.

ನವದೆಹಲಿ(ಡಿ.7):  ದಕ್ಷಿಣದ ರಾಜ್ಯಗಳಲ್ಲಿ ಅನಾಹುತ ಸೃಷ್ಟಿಸಿದ ಬಳಿಕ ಮಹಾರಾಷ್ಟ್ರ ಮತ್ತು ಗುಜರಾತ್ ಮಾರ್ಗವಾಗಿ ಚಲಿಸಿದ ಓಖಿ ಚಂಡಮಾರುತ ಉತ್ತರಭಾರತದ ರಾಜ್ಯಗಳಿಗೆ ವರವಾಗುವ ಸಾಧ್ಯತೆ ಇದೆ. ದೆಹಲಿ, ಉತ್ತರ ಭಾರತ ರಾಜ್ಯ ಆವರಿಸಿರುವ ವಾಯುಮಾಲಿನ್ಯ ನಿವಾರಿಸುವಲ್ಲಿ ಓಖಿ ಚಂಡ ಮಾರುತ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

ಓಖಿ ಚಂಡಮಾರುತ ಸಾಗುತ್ತಿರುವ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಅದರನ್ವಯ, ಓಕಿ ಗುಜರಾತ್’ನಿಂದ ದೆಹಲಿಯತ್ತ ಮುಖ ಮಾಡಿದ್ದು, ಚಂಡಮಾರುತದ ಅಬ್ಬರಕ್ಕೆ ವಾಯು ಮಾಲಿನ್ಯವೂ ಕೊಚ್ಚಿಹೋಗಬಹುದು ಎಂದು ನಾಸಾ ಹೇಳಿದೆ.

click me!