ಮತ್ತೆ ನೀರು ಬಿಡಲು ಸಾಧ್ಯವೇ ಇಲ್ಲ, ನಮಗೆ ಕುಡಿಯಲು ನೀರು ಬೇಕು - ನಾರಿಮನ್

By internet desk-First Published Sep 27, 2016, 9:46 AM IST
Highlights

ಸುಪ್ರೀಂಕೋರ್ಟ್`ನಲ್ಲಿ ವಾದ ಮುಂದುವರೆಸಿದ ಫಾಲಿ ನಾರಿಮನ್

ನವದೆಹಲಿ(ಸೆ.27): 2 ದಿನ 6 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ ನೀಡುತ್ತಿದ್ದಂತೆ ರಾಜ್ಯದ ಪರ ವಕೀಲ ಫಾಲಿ ನಾರಿಮನ್ ಮತ್ತೆ ವಾದಕ್ಕೆ ನಿಂತಿದ್ದಾರೆ. ತಮಿಳುನಾಡಿಗೆ ಮತ್ತೆ ನೀರು ಬಿಡಲು ಸಾಧ್ಯವೇ ಇಲ್ಲ, ನಿಮ್ಮ ಆದೇಶವನ್ನ ಪಾಲಿಸಲು ಸಾಧ್ಯವಿಲ್ಲ. ನಮ್ಮ ಬಳಿ ಇರುವುದು ಕುಡಿಯುವ ನೀರು ಮಾತ್ರ ಎಂದು ವಾದ ಮಂಡಿಸಿದ್ಧಾರೆ.

ಇದಕ್ಕೂ ಮುನ್ನ, ಕುಡಿಯುವ ನೀರಿಗಾಗಿ ಜಲಾಶಯಗಳ ನೀರನ್ನ uಳಿಸಿಕೊಳ್ಳುವ  ವಿಧಾನಸಭೆ ನಿರ್ಣಯ ಸುಪ್ರೀಂಕೋರ್ಟ್​ ಆದೇಶ ಅನುಷ್ಠಾನಕ್ಕೆ ಅಡ್ಡಿ ಬರುವುದಿಲ್ಲ,  ವಿಧಾನಸಭೆ ನಿರ್ಣಯ ಪ್ರತ್ಯೇಕವಾದಂತಹ ವಿಷಯ, ಸಂವಿಧಾನದ ಯಾವ ಕಲಂ ಆಧಾರದ ಮೇಲೆ ವಿಧಾನಸಭೆ ನಿರ್ಣಯ ತೆಗೆದುಕೊಂಡಿದೆ? ಎಂದು ರಾಜ್ಯದ ಪರ ವಕೀಲ ನಾರಿಮನ್​ ಅವರನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.​

Latest Videos

 

click me!