ಮೋದಿ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್, ಅಂದು ಸಂಪುಟ ಸೇರುವರ್ಯಾರು?

By Web DeskFirst Published May 26, 2019, 7:32 PM IST
Highlights

ಲೋಕಸಭೆ ಚುನಾವಣೆಯಲ್ಲಿ ಚಾರಿತ್ರಿಕ ಜಯ ತಂದುಕೊಟ್ಟಿರೋ ನರೇಂದ್ರ ಮೋದಿ, 2ನೇ ಬಾರಿಗೆ ಪ್ರಧಾನಿಯಾಗಿ ಪಟ್ಟಕ್ಕೇರಲು ಮುಹೂರ್ತ ಫಿಕ್ಸ್ ಆಗಿದೆ.  ಹಾಗಾದ್ರೆ  ಈ ಬಾರಿಯ ನಮೋ ಪಟ್ಟಾಭಿಷೇಕದಲ್ಲಿ ಯಾರೆಲ್ಲ ಗಣ್ಯ ಸಾಕ್ಷಿಯಾಗಲಿದ್ದಾರೆ? ಎನ್ನುವುದನ್ನು ಮುಂದೆ ಓದಿ..  

ನವದೆಹಲಿ, [ಮೇ.26]: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿರುವ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಿದ್ದು, ಮೇ 30ರಂದು ಪದಗ್ರಹಣ ಸಮಾರಂಭ ನಡೆಯಲಿದೆ.

ಮೇ.30ರ ಸಂಜೆ 7 ಗಂಟೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Narendra Modi to take oath as PM on 30th May at 7pm, at Rashtrapati Bhavan. Members of Union Council of Ministers to also take oath. pic.twitter.com/qC2kTE35fE

— ANI (@ANI)

ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇತರೆ ಸಂಪುಟದ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ರಾಜನಾಥ್ ಸಿಂಗ್, ಅಮಿತ್ ಶಾ, ಗಡ್ಕರಿ ಸೇರಿದಂತೆ ಇನ್ನು ಕೆಲ 'ಎ' ದರ್ಜೆಯ ನಾಯಕರುಗಳು ಸಚಿವರಾಗಿ ಪ್ರಮಾಣವಚನ ಸ್ವೀರಿಸುವ ಸಾಧ್ಯತೆಗಳಿವೆ.

ಇನ್ನು ಈ ಬಾರಿಯ ನಮೋ ಪಟ್ಟಾಭಿಷೇಕಕ್ಕೆ  ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಫ್ರಾನ್ಸ್ ಪ್ರಧಾನಿ  ಇಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಶ್ರೀಲಂಕಾ ಅಧ್ಯಕ್ಷ  ಮೈತ್ರಿಪಾಲ ಸಿರಿಸೇನಾ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.

click me!