ಲೋಕ ಚುನಾವಣೆಯಿಂದ 15 ಸಾವಿರ ಶಾಲೆಗಳಿಗೆ ಸಿಕ್ತು ವಿದ್ಯುತ್ ಭಾಗ್ಯ!

Published : May 26, 2019, 04:43 PM ISTUpdated : Dec 18, 2019, 04:37 PM IST
ಲೋಕ ಚುನಾವಣೆಯಿಂದ 15 ಸಾವಿರ ಶಾಲೆಗಳಿಗೆ ಸಿಕ್ತು ವಿದ್ಯುತ್ ಭಾಗ್ಯ!

ಸಾರಾಂಶ

ಲೋಕಸಭಾ ಚುನಾವಣೆಹ್ನಿನೆಲೆ ಮಧ್ಯಪ್ರದೇಶ ಹಾಗೂ ಬಿಹಾರದ ಶಾಲೆಗಳಿಗೆ ಸಿಕ್ತು ವಿದ್ಯುತ್ ಭಾಗ್ಯ| ಚುನಾವಣೆಗೂ ಮೊದಲು ವಿದ್ಯುತ್ ಇಲ್ಲದ ಶಾಲೆಗಳಿಗೆ ಚುನಾವಣೆ ಬಳಿಕ ಬೆಳಕು

ಭೋಪಾಲ್[ಮೇ.26]: ಮಧ್ಯಪ್ರದೇಶದ ಹಳ್ಳಿಗಾಡಿನಲ್ಲಿರುವ ಶಾಲಾ ಮಕ್ಕಳಿಗೆ ಈವರೆಗೆ ವಿದ್ಯುತ್ ಇಲ್ಲದೇ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇತ್ತು. ಆದರೆ ಲೋಕಸಭಾ ಚುನಾವಣೆಗಾಗಿ ನಿರ್ಮಿಸಿದ ಮತದಾನ ಕೇಂದ್ರಗಳಿಂದಾಗಿ ಶಾಲೆಗಳಿಗೆ ವಿದ್ಯುತ್, ನೀರಿನಂತಹ ಮೂಲಭೂತ ಸೌಕರ್ಯಗಳು ಸಿಕ್ಕಿವೆ. 

ಲಭ್ಯವಾದ ಮಾಹಿತಿ ಅನ್ವಯ ದೂರದೂರುಗಳಲ್ಲಿರುವ 15 ಸಾವಿರ ಪ್ರಾಥಮಿಕ ಪಾಠ ಶಾಲೆಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಈ ಕುರಿತಾಗಿ ಮಾಹಿತಿ ನೀಡುತ್ತಾ 'ಚುನಾವಣಾ ಮತಗಟ್ಟೆ ಸ್ಥಾಪಿಸಿದ್ದ ಯಾವೆಲ್ಲಾ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲವೋ, ಆ ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ ವಿದ್ಯುತ್ ಇರಲಿದೆ. ಕೆಲವೊಂದು ಕಾರಣಗಳಿಂದ ಈ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ. ಆದರೆ ಮತದಾನ ಮಾಡುವ ಇವಿಎಂ ಸೇರಿದಂತೆ ಇನ್ನಿತರ ಉಪಕರಣಗಳಿಗೆ ವಿದ್ಯುತ್ ಅತ್ಯಗತ್ಯ. ಹೀಗಾಗಿ ಈ ಸಮಸ್ಯೆ ನಿವಾರಣೆ ಆಗಿದೆ' ಎಂದಿದ್ದಾರೆ.

ವರದಿಯನ್ವಯ ಮಧ್ಯಪ್ರದೇಶದ ಝಾಬುವಾ, ರತ್ಲಾಮ್, ಬೈತೂಲ್ ಹಾಗೂ ಬಿಂಡ್ ಸೇರಿದಂತೆ ಇನ್ನಿತರ ಹಿಂದುಳಿದ ಪ್ರದೇಶಗಳ ಹಳ್ಳಿಗಳಲ್ಲಿ ಕೆಲ ಶಾಲೆಗಳನ್ನು ಇದೇ ಮೊದಲ ಬಾರಿ ಮತದಾನ ಕೇಂದ್ರವನ್ನಾಗಿ ಮಾಡಲಾಗಿತ್ತು. ಹೀಗಿರುವಾಗ ವಿದ್ಯುತ್ ಸಂಪರ್ಕ ಅತ್ಯಗತ್ಯ, ಬೇರೆ ವಿಧಿ ಇಲ್ಲದ ಸರ್ಕಾರ ಶಾಲೆಗಳಿಗೆ ವಿದ್ಯುತ್ ಸಂಪರ್ಕ ಕೊಡಲೇಬೇಕಿತ್ತು. ಇನ್ನು ಬಿಹಾರ ಕೆಲ ಶಾಲೆಗಳಿಗೂ ಇದೇ ರೀತಿ ವಿದ್ಯುತ್ ಸಂಪರ್ಕ ದೊರಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್