ರಾಜ್ಯದ ಗ್ರಾಹಕರಿಗೆ ಕಾದಿದೆ ಭಾರೀ ಶಾಕ್

By Suvarna Web DeskFirst Published Mar 16, 2017, 10:49 PM IST
Highlights

ಸದ್ಯ ನಂದಿನಿ ಹಾಲಿನ ದರ ಲೀಟರ್​ಗೆ 33 ರೂ.ಇದ್ದು, 36ರೂ ಏರಿಕೆ ಮಾಡಬೇಕು ಅಂತ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾಪಿಸಿದೆ. ಈ ಬಗ್ಗೆ ಸುವರ್ಣ ನ್ಯೂಸ್ ಜತೆ ಮಾತನಾಡಿರುವ KMF ಎಂಡಿ ರಾಕೇಶ್ ಸಿಂಗ್ ಹಾಲಿನ ದರ ಪರಿಷ್ಕರಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಶೀಘ್ರದಲ್ಲೇ ಹಾಲಿನ ದರ ಹೆಚ್ಚಳವಾಗುವ ಸಂಭವ ಇದೆ. ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಲೀಟರ್​ಗೆ 2-3 ರೂಪಾಯಿ ದರ ಹೆಚ್ಚಳದ ಪ್ರಸ್ತಾವನೆಯನ್ನ ಕೆಎಂಫ್ ಸರ್ಕಾರಕ್ಕೆ ಸಲ್ಲಿಸಿದ್ದು, ಹದಿನೈದು ದಿನದಲ್ಲಿ ಹಾಲಿನ ದರ ಪರಿಷ್ಕರಣೆ ಆಗುವ ಸಾಧ್ಯತೆಗಳಿವೆ.

ಸದ್ಯ ನಂದಿನಿ ಹಾಲಿನ ದರ ಲೀಟರ್​ಗೆ 33 ರೂ.ಇದ್ದು, 36ರೂ ಏರಿಕೆ ಮಾಡಬೇಕು ಅಂತ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾಪಿಸಿದೆ. ಈ ಬಗ್ಗೆ ಸುವರ್ಣ ನ್ಯೂಸ್ ಜತೆ ಮಾತನಾಡಿರುವ KMF ಎಂಡಿ ರಾಕೇಶ್ ಸಿಂಗ್ ಹಾಲಿನ ದರ ಪರಿಷ್ಕರಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಸರ್ಕಾರದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಅಂತ ಹೇಳಿದ್ದಾರೆ.

click me!