
ನವದೆಹಲಿ(ಮಾ.16): ವಿಶ್ವವಿಖ್ಯಾತ ತಾಜ್'ಮಹಲ್'ಗೆ ಉಗ್ರರ ದಾಳಿಯ ಭೀತಿ ಎದುರಾಗಿದೆ.
ತಾಜ್‌ಮಹಲ್ ಮೇಲೆ ಯಾವೆಲ್ಲ ರೀತಿಯಾಗಿ ದಾಳಿ ಮಾಡಬಹುದು ಎಂಬುದರ ಕುರಿತು ರಚನೆ ಮಾಡಲಾದ ಚಿತ್ರ ಐಸಿಸ್ ಪರವಾದ ವೆಬ್'ಸೈಟ್'ನಲ್ಲಿ ಪ್ರಕಟವಾಗಿದೆ. ಜೊತೆಗೆ ಈ ಚಿತ್ರವು ಮಾ.14ರಂದು ‘ಟೆಲಿಗ್ರಾಮ್’ ಅಪ್ಲಿಕೇಶನ್ ಮೂಲಕ ಎಲ್ಲೆಡೆ ರವಾನೆಯಾಗಿದೆ.
ಅಹ್ವಾಲ್ ಉಮ್ಮಾತ್ ಎಂಬಾತನಿಂದ ರಚನೆಯಾಗಿರುವ ‘ತಾಜ್ ಮಹಲ್’ ಚಿತ್ರದಲ್ಲಿ ದಾಳಿಗೆ ಸಿದ್ಧವಾಗಿ ನಿಂತಿರುವ ವ್ಯಕ್ತಿ ಸ್ಫೋಟಕ ತುಂಬಿದ ಹಿಂಬದಿ ಬ್ಯಾಗ್ ತೊಟ್ಟು ಬಂದೂಕು ಹಿಡಿದು ನಿಂತಿದ್ದಾನೆ.
ಮತ್ತೊಂದು ಚಿತ್ರದಲ್ಲಿ ಅರೇಬಿಕ್ ಭಾಷೆಯಲ್ಲಿ ‘ಆಗ್ರಾದಲ್ಲಿ ಹುತಾತ್ಮರಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂಬ ಅಕ್ಷರಗಳು, ಆತ್ಮಾಹುತಿ ದಾಳಿಯ ಸೂಚನೆ ನೀಡಿವೆ.
ಮಾ.8ರಂದು ಲಖನೌನ ಮನೆಯೊಂದರಲ್ಲಿ ಅಡಗಿದ್ದ ಶಂಕಿತ ಉಗ್ರ ಸೈಫುಲ್ಲಾ ಹತ್ಯೆಯ ಬಳಿಕ, ಮತ್ತೋರ್ವ ಐಎಸ್ ಪರ ಉಗ್ರ ಭಾರತದಲ್ಲಿ ದಾಳಿ ಬೆದರಿಕೆಯ ಸಂದೇಶವನ್ನು ಟೆಲಿಗ್ರಾಮ್'ನಲ್ಲಿ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.