ಹ್ಯಾರಿಸ್ ಪುತ್ರ 2 ದಿನ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ: ಪೊಲೀಸ್ ವಶದಲ್ಲಿದ್ದಾಗಲೆ ಬೆಂಬಗಲಿರಿಂದ ಮತ್ತೆ ದರ್ಪ,ಮಾಧ್ಯಮದವರ ಮೇಲೆ ಹಲ್ಲೆ

By Suvarna Web deskFirst Published Feb 19, 2018, 6:01 PM IST
Highlights

ನಲಪಾಡ್ ಸೇರಿದಂತೆ ಹಲ್ಲೆಯಲ್ಲಿ ಭಾಗಿಯಾಗಿ 7 ಮಂದಿಯನ್ನು ಫೆ.21ರವರೆಗೂ ಸಿಸಿಬಿ ವಶಕ್ಕೆ ನೀಡಲಾಗಿದೆ

ಬೆಂಗಳೂರು(ಫೆ.19): ಉದ್ಯಮಿಯೊಬ್ಬರ ಪುತ್ರ ವಿದ್ಯತ್ ಮೇಲೆ ಹಲ್ಲೆ ಪೊಲೀಸ್ ವಶದಲ್ಲಿರುವ ಶಾಂತಿನಗರದ ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್'ನನ್ನು 8ನೇ ಎಪಿಎಂಸಿ ನ್ಯಾಯಾಲಯ 2 ದಿನಗಳ ಕಾಲ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ ನೀಡಿದೆ.

ನಲಪಾಡ್ ಸೇರಿದಂತೆ ಹಲ್ಲೆಯಲ್ಲಿ ಭಾಗಿಯಾಗಿ 7 ಮಂದಿಯನ್ನು ಫೆ.21ರವರೆಗೂ ಕಬ್ಬನ್ ಪಾರ್ಕ್ ಪೊಲೀಸರ ವಶಕ್ಕೆ ನೀಡಲಾಗಿದೆ. 8 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡುವಂತೆ ಸಿಸಿಬಿ ಪರ ವಕೀಲರು ಕೋರಿದ್ದರು. ಆದರೆ 2 ದಿನಗಳ ಕಾಲ ಮಾತ್ರ ನೀಡಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ತೊಂದರೆ ನೀಡಿದರೆ ಎಂದು ಕೇಳಲಾಯಿತು. ಈ ಪ್ರಶ್ನೆಗೆ ನಲ'ಪಾಡ್'ನಿಂದ ಇಲ್ಲ ಎಂದು ಉತ್ತರ ನೀಡಿದ್ದಾನೆ.

ಸಿಸಿಬಿ ವಶದಲ್ಲಿದ್ದಾಗ ಮಾಧ್ಯಮದವರ ಮೇಲೆ ಹಲ್ಲೆ  

ಸಿಸಿಬಿ ಪೊಲೀಸ್ ವಶದಲ್ಲಿದ್ದಾಗ ಮಾಧ್ಯಮದವರು ಚಿತ್ರೀಕರಣ ಮಾಡುತ್ತಿದ್ದಾಗ ಮಾಧ್ಯಮ ಪ್ರತಿನಿಧಿಯ ಛಾಯಾಗ್ರಾಹಕರೊಬ್ಬರ ಮೇಲೆ ನಲಪಾಡ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಒಂದು ಕ್ಯಾಮರಾವನ್ನು ಕೂಡ ಜಖಂಗೊಳಿಸಿದ್ದಾರೆ.

click me!