
ಬೆಂಗಳೂರು : ಉದ್ಯಮಿ ಪುತ್ರನ ಮೇಲೆ ದರ್ಪ ಮೆರೆದು ಪೊಲೀಸ್ ವಶದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮೊದಲ ದಿನ ಕಳೆದಿದ್ದಾನೆ. ಮೊಹಮ್ಮದ್ ನಲಪಾಡ್ನನ್ನ ಕಬ್ಬನ್ ಪಾರ್ಕ್ ಠಾಣೆಯಲ್ಲೇ ವಿಚಾರಣೆಗೆ ಒಳಪಡಿಸಲಾಯ್ತು. ರಾತ್ರಿ 8ಕ್ಕೆ ಆರಂಭವಾದ ನಲಪಾಡ್ ವಿಚಾರಣೆ 11.30ರವರೆಗೂ ನಡೆಯಿತು.
ವಿಚಾರಣೆ ವೇಳೆ ಘಟನೆ ನಡೆದಾಗ ಯಾರ್ಯಾರಿದ್ರು..?ಏನಕ್ಕೆ ಗಲಾಟೆ ನಡೀತು..?ವಿದ್ವತ್ ಮೇಲೆ ಹಲ್ಲೆ ಮಾಡಿದ್ದು ಯಾಕೆ..?ಎಂಬಿತ್ಯಾದಿ ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದಾರೆ. ಆದರೆ ಆರೋಪಿ ನಲಪಾಡ್ ಮಾತ್ರ ನಗುಮುಖದಿಂದಲೇ ಉತ್ತರ ನೀಡಿದ್ದಾನೆ ಎನ್ನಲಾಗುತ್ತಿದೆ.
ಅಲ್ಲದೆ, ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಅನ್ನೋ ಥರಾ ಹಾರಿಕೆ ಉತ್ತರ ನೀಡಿದ್ದಾನೆ ಎನ್ನಲಾಗಿದೆ. ರಾತ್ರಿ 11.30ಕ್ಕೆ ವಿಚಾರಣೆ ಮುಕ್ತಾಯವಾಗುತ್ತಲೇ ನಲಪಾಡ್ ಪೊಲೀಸರಿಗೆ ತರಿಸಿದ್ದ ಊಟವನ್ನೇ ಸೇವಿಸಿದ್ದಾನೆ.
ಅನ್ನ, ಚಪಾತಿ, ಸಾರು ಊಟ ಮುಗಿಸಿ, ಸ್ಟೇಷನ್ನಲ್ಲೇ ರಾತ್ರಿ ಕಳೆದಿದ್ದಾನೆ. ಇನ್ನೂ ಇಂದು ಕೂಡ ನಲಪಾಡ್ ವಿಚಾರಣೆ ನಡೆಯಲಿದ್ದು, ಘಟನೆ ನಡೆದ ಹೋಟೆಲ್ಗೆ ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.