
ಮಹಾರಾಷ್ಟ್ರ(ಆ.29): ದೇಶದಲ್ಲಿ ಸರಣಿ ರೈಲು ಅವಘಡಗಳು ಮುಂದುವರಿದಿದ್ದು, ಇಂದು ಬೆಳಗ್ಗೆ ಮಹಾರಾಷ್ಟ್ರದಲ್ಲಿ ರೈಲು ಹಳಿ ತಪ್ಪಿದೆ. ಮುಂಬೈ - ನಾಗ್ಪುರ್ ದುರಂತೋ ಎಕ್ಸ್'ಪ್ರೆಸ್ ರೈಲು ಹಳಿ ತಪ್ಪಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.
ಕಳೆದ 10 ದಿನಗಳಲ್ಲಿ ಇದು 4ನೇ ರೈಲು ಅವಘಡವಾಗಿದೆ. ಬೆಳಿಗ್ಗೆ 6.30ರ ಸುಮಾರಿಗೆ ಕಲ್ಯಾಣ್ ಸಮೀಪ ಈ ಘಟನೆ ನಡೆದಿದ್ದು, ರೈಲಿನ 5 ಎಸಿ ಬೋಗಿಗಳು ಹಳಿ ತಪ್ಪಿದೆ. ರಕ್ಷಣಾ ಕಾರ್ಯ ಸಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿರುವುದು ವರದಿಯಾಗಿಲ್ಲ.
ದುರಂತೋ ರೈಲು ಹಳಿ ತಪ್ಪಿದ್ದರಿಂದ ನಾಗ್ಪುರ್ - ಮುಂಬೈ ಮಾರ್ಗಕ್ಕೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ರೈಲು ಬೆಳಗ್ಗೆ 7.55ಕ್ಕೆ ಮುಂಬೈ ತಲುಪಬೇಕಿತ್ತು. ಮಹಾರಾಷ್ಟ್ರದಲ್ಲಿ ಒಂದು ವಾರದ ಅವಧಿಯಲ್ಲಿ ನಡೆದ ಎರಡನೇ ರೈಲು ಅವಘಡ ಇದಾಗಿದೆ.
ಇದೇ 25ರಂದು ಮಹಿಮಾ ಬಳಿ ಅಂಧೇರಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ನಡುವಿನ ಲೋಕಲ್ ಟ್ರೈನ್‌ನ ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.