
ನವದೆಹಲಿ(ಆ.29): ಅತ್ಯಾಚಾರ ಆರೋಪ ಹೊತ್ತು ಬಿಂದಾಸ್ ಆಗಿ ಸಿನೆಮಾ ಮಾಡ್ಕೊಂಡು ಸುತ್ತಾಡ್ತಿದ್ದ ರಾಕ್ ಸ್ಟಾರ್ ಬಾಬಾ, ಈಗ ಜೈಲಲ್ಲಿ ಕೂತು ಕಂಬಿ ಎಣಿಸುತ್ತಿದ್ದಾನೆ. ರಾಮ್ ರಹೀಂ ಬಾಬಾಗೆ ಇಂದು ಬಂದಿರುವ ದುಸ್ಥಿತಿ, ಅನೇಕ ಸ್ವಾಮಿಗಳಿಗೆ ನಿದ್ದೆಗೆಡಿಸಿದೆ. ಮಧ್ಯರಾತ್ರಿ ಗಾಢ ನಿದ್ರೆಯಲ್ಲೂ ಬೆಚ್ಚಿಬೀಳುವಂತೆ ಮಾಡಿದೆ. ಆದ್ರೆ, ಅವರೆಲ್ಲಾ ಜೈಲು ಕಂಬಿ ಎಣಿಸ್ತಾರಾ. ಅವರ ಹೆಸರುಗಳನ್ನ ಕೇಳಿದ್ರೆ, ಅವರ ಹಿಂದಿರೋ ಪವರ್ ನೋಡಿದ್ರೆ ಸಾಧ್ಯವೇ ಇಲ್ಲವೇನೋ ಎನ್ನಿಸಿಬಿಡುತ್ತೆ. ಒಬ್ಬರಲ್ಲ ಇಬ್ಬರಲ್ಲ, ಗಲ್ಲಿಗೊಂದರಂತೆ ಇರೋ ಡೋಂಗಿ ಬಾಬಾಗಳು ಜೈಲು ಪಾಲಾಗೋದನ್ನ ತಪ್ಪಿಸಿಕೊಳ್ಳೋದ್ರಲ್ಲಿ ಪಿಹೆಚ್ಡಿ ಮಾಡಿಬಿಟ್ಟಿದ್ದಾರೆ. ಅಸಾರಾಂ ಬಾಪು, ರಾಮ್ ಪಾಲ್ ಬಾಬ, ನಿತ್ಯಾನಂದ ಎಷ್ಟು ಹೆಸರುಗಳು? ಅದರಲ್ಲೂ ರಾಜ್ಯ ಕಂಡ ನಿತ್ಯಾನಂದನ ಲೀಲೆ ಒಂದೆರಡಲ್ಲ.
ಅದು 2010. ನಿತ್ಯಾನಂದನ ಧ್ಯಾನಪೀಠಂನಲ್ಲಿ ನಡೆದಿದ್ದ ರಾಸಲೀಲೆ ವಿಡಿಯೋ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಒಂದರ ಹಿಂದೊಂದರಂತೆ ಧ್ಯಾನಪೀಠಂ ಮತ್ತು ನಿತ್ಯಾನಂದನ ಕರ್ಮಗಳು ಪ್ರತಿನಿತ್ಯ ಹೊರಬೀಳತೊಡಗಿದವು. ಈಗ ಜೈಲುಪಾಲಾಗಿರುವ ಗುರುಪ್ರೀತ್ ರಾಮ್ ರಹೀಂ ಬಾಬಾನದ್ದೂ ಸೇಮ್ ಟು ಸೇಮ್ ಅದೇ. ಆತನೂ ಸ್ವಯಂಘೋಷಿತ ದೇವಮಾನವ. ಈತನೂ ಸ್ವಯಂಘೋಷಿತ ದೇವಮಾನವ.
ಒಂದೊಂದೇ ವಿಷಯ ನೋಡುತ್ತಾ ಹೋದರೆ, ರಾಮ್ ರಹೀಮ್ ಬಾಬಾ ಮಾಡಿದ್ದ ಅಪರಾಧಗಳಿಗೂ, ನಿತ್ಯಾನಂದನ ಮೇಲಿರುವ ಆರೋಪಗಳಿಗೂ ಹೋಲಿಕೆಗಳು ತುಂಬಾನೇ ಇವೆ.
-ಆರೋಪಗಳು ಒಂದೇ ಬಾಬಾಗೆ ಜೈಲು, ನಿತ್ಯಾನಂದ ಇನ್ನೂ ಸೇಫ್..!
-ಎರಡೂ ಪ್ರಕರಣಗಳಲ್ಲಿರುವುದು ಅತ್ಯಾಚಾರದ ಆರೋಪ
-ಮೊದಲು ಪ್ರಕರಣ ಬೆಳಕಿಗೆ ಬಂದಿದ್ದು ಆಶ್ರಮದ ಅನಾಮಧೇಯ ವ್ಯಕ್ತಿಗಳಿಂದ
-ಇಬ್ಬರ ಮೇಲೂ ಇರುವುದು ‘ನಾನೇ ದೇವರು’ ಎಂದು ಹೇಳಿಕೊಂಡು ವಂಚಿಸಿದ ಆರೋಪ
-ಎರಡೂ ಪ್ರಕರಣಗಳಲ್ಲಿ ಸುಮಾರು 40 ಸಾಕ್ಷಿಗಳ ವಿಚಾರಣೆ ನಡೆದಿದೆ
-ನಿತ್ಯಾನಂದ ಪ್ರಕರಣದಲ್ಲೂ ಇಬ್ಬರು ಸಂತ್ರಸ್ತರು. ಲೆನಿನ್ ಮತ್ತು ಆರತಿ ರಾವ್
-ಎರಡೂ ಆಶ್ರಮಗಳಲ್ಲಿ ನಿಗೂಢ ಸಾವು ಸಂಭವಿಸಿವೆ
-ಎರಡೂ ಪ್ರಕರಣಗಳಲ್ಲಿ ದೂರುದಾರರು, ಸಾಕ್ಷಿದಾರರಿಗೆ ಕಿರುಕುಳ ಆರೋಪ
-ಇಬ್ಬರೂ ದೇವಮಾನವರು ‘ನಮಗೆ ಪುರುಷತ್ವವೇ ಇಲ್ಲ’ ಎಂದು ವಾದಿಸಿದ್ದಾರೆ
ನಿಮಗೆ ಅಚ್ಚರಿಯಾಗಬಹುದು. ನೂರಾರು ಯುವತಿಯರ ಮೇಲೆ ಅತ್ಯಾಚಾರ ನಡೆಸಿದ್ದ ರಾಮ್ ರಹೀಮ್ ಬಾಬಾ, ತಾನೊಬ್ಬ ನಪುಂಸಕ ಎಂದು ವಾದಿಸಿದ್ದ. ನಿತ್ಯಾನಂದನಂತೂ, ನನ್ನ ದೇಹ 6 ವರ್ಷದ ಬಾಲಕನ ದೇಹ. ನನಗೆ ಲೈಂಗಿಕ ಸಾಮರ್ಥ್ಯವೇ ಇಲ್ಲ ಎಂದು ವಾದಿಸಿದ್ದ. ಆದರೆ, ಪುರುಷತ್ವ ಪರೀಕ್ಷೆಯಲ್ಲಿ ಅದು ಸುಳ್ಳೆಂಬುದು ಸಾಬೀತಾಗಿತ್ತು. ಧ್ವನಿ ಪರೀಕ್ಷೆಯಲ್ಲೂ ನಿತ್ಯಾನಂದನ ಸುಳ್ಳು ಋಜುವಾತಾಗಿತ್ತು.
-ದೂರುದಾರ ಲೆನಿನ್, ಆರತಿ ರಾವ್, ವಿನಯ್ ಭಾರದ್ವಾಜ್ ವಿರುದ್ಧ ದೂರು
-ದೂರದಾರ ಲೆನಿನ್ ವಿರುದ್ಧ ಭಾರತ, ಅಮೆರಿಕದಲ್ಲಿ 20ಕ್ಕೂ ಹೆಚ್ಚು ಕೇಸ್
-ಆರತಿ ರಾವ್ ವಿರುದ್ಧ ಭಾರತ, ಅಮೆರಿಕದಲ್ಲಿ 17ಕ್ಕೂ ಹೆಚ್ಚು ಕೇಸ್
-ದೂರುದಾರರು, ಸಾಕ್ಷಿದಾರರ ವಿರುದ್ಧ ಭಾರತ, ವಿದೇಶಗಳಲ್ಲಿ 20ಕ್ಕೂ ಹೆಚ್ಚು ಕೇಸ್
-ದೂರುದಾರರು, ಸಾಕ್ಷಿದಾರರು ಕೋರ್ಟ್ಗಳಿಗೆ ಅಲೆಯುತ್ತಲೇ ಇರಬೇಕು
-ಸಾಕ್ಷಿದಾರರ ಕುಟುಂಬದ ವಿರುದ್ಧವೂ ನಿತ್ಯಾನಂದನಿಂದ ಹಲವು ಕೇಸ್
-ವಿಚಾರಣೆ ಕೈಗೆತ್ತಿಕೊಂಡ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ದೂರು
-ಸಿಎಂ ಆಗಿದ್ದ ಸದಾನಂದ ಗೌಡ ವಿರುದ್ಧವೂ ಮಾನನಷ್ಟ ಮೊಕದ್ದಮೆ
-ನಿತ್ಯಾನಂದ ಕೇಸ್ ಮುಟ್ಟಿದವರಿಗೆಲ್ಲ ದೂರುಗಳ ಮೂಲಕವೇ ಹಿಂಸೆ
ನಿತ್ಯಾನಂದನನ್ನು ಯಾರೇ ಟಚ್ ಮಾಡಲಿ, ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ಳಲು ಯತ್ನಿಸಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದು, ಬ್ಲಾಕ್ಮೇಲ್ ಕೇಸು ಹಾಕುವುದು, ಇನ್ಯಾವುದೋ ಕೇಸು ದಾಖಲಿಸುವುದು ನಿತ್ಯಾನಂದ ಪಾಲಿಸಿಕೊಂಡು ಬಂದಿರುವ ಪರಿಪಾಠ. ನಿತ್ಯಾ ವಿರುದ್ಧದ ಪ್ರಕರಣಗಳನ್ನು ಸಿಐಡಿಗೆ ಕೊಟ್ಟಿದ್ದ ಸಿಎಂ ಸದಾನಂದ ಗೌಡರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಿದ್ದ ಭೂಪ ನಿತ್ಯಾನಂದ.
-ಪುರುಷತ್ವ ಪರೀಕ್ಷೆಗೆ ಸುಪ್ರೀಂಕೋರ್ಟ್ ಸೂಚಿಸುವವರೆಗೆ ಒಪ್ಪಲಿಲ್ಲ
-ಅಮೆರಿಕದ ಲ್ಯಾಬ್ ರಿಪೋರ್ಟ್ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದ ನಿತ್ಯಾನಂದ
-ಕೋರ್ಟ್ಗಳ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಹೋಗುತ್ತಲೇ ಇದ್ದಾನೆ
-2010ರಲ್ಲಿ ದಾಖಲಾದ ಪ್ರಕರಣ, ಇನ್ನೂ ವಿಚಾರಣೆಯೇ ಶುರುವಾಗಿಲ್ಲ
-ಕೋ-ರ್ಟ್ ವಿಚಾರಣೆಯನ್ನು ಸಾಧ್ಯವಾದಷ್ಟೂ ವಿಳಂಬ ಮಾಡುವ ತಂತ್ರ
ಒಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಾಲ ಏನೂ ನಡೆಯದಂತೆ ನೋಡಿಕೊಳ್ಳುವುದು ನಿತ್ಯಾನಂದನ ತಂತ್ರ. ಆದರೆ, ಈ ಬಾರಿ ನಿತ್ಯಾನಂದ ತನ್ನ ಪುರುಷತ್ವ ಪರೀಕ್ಷೆ ವರದಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇದೇ ಸೆಪ್ಟೆಂಬರ್ 5ಕ್ಕೆ ಸುಪ್ರೀಂಕೋರ್ಟ್ನಲ್ಲೇ ಬರುತ್ತಿದೆ. ಅದು ನೂತನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠದ ಎದುರೇ ಬರುವ ಸಾಧ್ಯತೆಗಳಿವೆ. ರಾಮ್ ರಹೀಮ್ ಬಾಬಾಗೆ ಆದಂತೆ, ನಿತ್ಯಾನಂದನಿಗೂ ಆಗುತ್ತಾ..? ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.