ಸರ್ಕಾರಕ್ಕೆ ಬಿಜೆಪಿ ಆಡಳಿತಾವಧಿಯ ಅವ್ಯವಹಾರಗಳ ಬಗೆಗಿನ ಮಧ್ಯಂತರ ವರದಿ ಸಲ್ಲಿಕೆ

Published : Dec 02, 2017, 08:10 AM ISTUpdated : Apr 11, 2018, 12:36 PM IST
ಸರ್ಕಾರಕ್ಕೆ ಬಿಜೆಪಿ ಆಡಳಿತಾವಧಿಯ ಅವ್ಯವಹಾರಗಳ ಬಗೆಗಿನ ಮಧ್ಯಂತರ ವರದಿ ಸಲ್ಲಿಕೆ

ಸಾರಾಂಶ

ಬಿಬಿಎಂಪಿ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಐಎಎಸ್ ಅಧಿಕಾರಿ ಕಠಾರಿಯಾ ವರದಿಯನ್ನು ಮರು ತನಿಖೆ ನಡೆಸಲಾಗಿದೆ. ಅದನ್ನು ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಮುಂದೆ ಇಡಲಾಗುತ್ತಿದೆ. ಕಠಾರಿಯಾ ಅವರ ತನಿಖಾ ವರದಿಯಂತೆ ಇದ್ದು, ಪಾಲಿಕೆ ಕೋಟ್ಯಂತರ ನಷ್ಟವಾಗಿರೋದನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು(ಡಿ.2): ಬೆಂಗಳೂರಿನಲ್ಲಿ  2008ರಿಂದ 2015ರವರೆಗಿನ ಅವಧಿಯಲ್ಲಿ ಬಿಜೆಪಿ ಆಡಳಿತ ಇದ್ದ  ಅವಧಿಯಲ್ಲಿ  ಗಾಂಧಿನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರಂ ಕ್ಷೇತ್ರದಲ್ಲಿ ನಡೆದಿದ್ದ ಸಾವಿರಾರು ಕೋಟಿ ರೂ.ಮೌಲ್ಯದ ಅವ್ಯವಹಾರ ಕುರಿತು  ಐಎಎಸ್ ಅಧಿಕಾರಿ ರಾಜೇಂದರ್ ಕುಮಾರ್ ಕಠಾರಿಯಾ ನಡೆಸಿದ್ದ ವರದಿಯನ್ನು ರಾಜ್ಯ ಸರ್ಕಾರ  ನಿವೃತ್ತ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚಿಸಿ ಮರು ಪರಿಶೀಲನೆಗೆ ಸೂಚನೆ ನೀಡಿತ್ತು.  ಈ ದಾಖಲೆಗಳನ್ನ ಮತ್ತೊಮ್ಮೆ ಪರಾಮರ್ಶಿಸಿದ ಸಮಿತಿ ನಿನ್ನೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. 

ಬಿಬಿಎಂಪಿ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಐಎಎಸ್ ಅಧಿಕಾರಿ ಕಠಾರಿಯಾ ವರದಿಯನ್ನು ಮರು ತನಿಖೆ ನಡೆಸಲಾಗಿದೆ. ಅದನ್ನು ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಮುಂದೆ ಇಡಲಾಗುತ್ತಿದೆ. ಕಠಾರಿಯಾ ಅವರ ತನಿಖಾ ವರದಿಯಂತೆ ಇದ್ದು, ಪಾಲಿಕೆ ಕೋಟ್ಯಂತರ ನಷ್ಟವಾಗಿರೋದನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

  ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡರು, ಒಂದು ವೇಳೆ ತಮ್ಮ ಪಕ್ಷಕ್ಕೆ ಮುಜುಗರ ತರುವಂತಹ ವರದಿ ಮಂಡನೆ ಆದರೆ ನಾವು ದಾಖಲೆ ಸಮೇತ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

10 ದಿನ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ
ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ