ನಾಗಾಲ್ಯಾಂಡ್'ಗೆ 81 ವರ್ಷದ ವೃದ್ಧ ಮುಖ್ಯಮಂತ್ರಿ

Published : Feb 20, 2017, 04:44 PM ISTUpdated : Apr 11, 2018, 12:54 PM IST
ನಾಗಾಲ್ಯಾಂಡ್'ಗೆ 81 ವರ್ಷದ ವೃದ್ಧ ಮುಖ್ಯಮಂತ್ರಿ

ಸಾರಾಂಶ

ರಾಜ್ಯಪಾಲ ಪದ್ಮನಾಭ ಆಚಾರ್ಯ ಅವರು ಲೀಝಿಟ್ಸು ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದರು.

ಕೊಹಿಮಾ(ಫೆ.20): ನಾಗಾಲ್ಯಾಂಡ್‌'ನಲ್ಲಿನ ಕೆಲ ದಿನಗಳ ರಾಜಕೀಯ ದೊಂಬರಾಟ ಕೊನೆಗೊಂಡಿದ್ದು, ನಾಗಾ ಪೀಪಲ್ಸ್ ಫ್ರಂಟ್ ಅಧ್ಯಕ್ಷ ಶುಹ್ರೋಝೆಲಿ ಲೀಝಿಟ್ಸು (81) ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಫೆ.22ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

60 ಸದಸ್ಯಬಲದ ನಾಗಾಲ್ಯಾಂಡ್ ವಿಧಾನಸಭೆಯಲ್ಲಿ ಡೆಮಾಕ್ರೆಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್ (ಡಿಎಎನ್) ರಂಗದ 59 ಶಾಸಕರು ಲೀಝಿಟ್ಸು ಅವರಿಗೆ ಬೆಂಬಲ ವ್ಯಕ್ತಪಡಿಸುವುದರೊಂದಿಗೆ ಅವರ ಸಿಎಂ ಹಾದಿ ಸುಗಮವಾಯಿತು. ಬಳಿಕ ರಾಜ್ಯಪಾಲ ಪದ್ಮನಾಭ ಆಚಾರ್ಯ ಅವರು ಲೀಝಿಟ್ಸು ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದರು.

ಬಿಜೆಪಿ, ನಾಗಾ ಫ್ರಂಟ್, ಪಕ್ಷೇತರರು ಸೇರಿಕೊಂಡು ‘ಡಿಎಎನ್’ ರಚಿಸಿಕೊಂಡಿದ್ದಾರೆ. ಬಿಜೆಪಿಗೆ ಆಪ್ತನಾಗಿರುವ ಮಾಜಿ ಸಿಎಂ, ನಾಗಾ ಫ್ರಂಟ್ ಸಂಸದ ನೆಫ್ಯೂ ರಿಯೋ ಸಿಎಂ ಆಗಬಹುದು ಎನ್ನಲಾಗಿತ್ತಾದರೂ ಅಂತಿಮ ಕ್ಷಣದಲ್ಲಿ ಅವರು ಹಿಂದೆ ಸರಿದರು.

ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾಚಾರದ ಕಾರಣ ಶಾಸಕರು ಬಂಡೆದ್ದಿದ್ದು, ಸಿಎಂ ಹುದ್ದೆಗೆ ಟಿ.ಆರ್. ಝೆಲಿಯಾಂಗ್ ಭಾನುವಾರವಷ್ಟೇ ರಾಜೀನಾಮೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಲಾಡ್ಜ್‌ವೊಂದರಲ್ಲಿ ಅಪ್ರಾಪ್ತೆ ಮೇಲಿನ ಸ್ವಾಮೀಜಿ ರೇ*ಪ್‌ ಸಾಬೀತು: ಇಂದು ಶಿಕ್ಷೆ ಪ್ರಕಟ
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಕೋರ್ಟ್‌ ಆದೇಶ, ಏನಿದು ಪ್ರಕರಣ?