ದಲೈಲಾಮಾ ಕಾರ್ಡ್ ಬಳಸಿದರೆ ತಕ್ಕ ಬೆಲೆ : ಭಾರತಕ್ಕೆ ಚೀನಾ ಎಚ್ಚರಿಕೆ

By Suvarna Web DeskFirst Published Apr 21, 2017, 3:39 AM IST
Highlights

ಭಾರತ ಹಾಗೂ ಚೀನಾ ನಡುವೆ ಅರುಣಾಚಲ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ಗಡಿ ವಿವಾದದ ಸಮಸ್ಯೆ ಹಲವು ವರ್ಷಗಳಿಂದ ಇದೆ. ಈ ಹಿನ್ನಲೆಯಲ್ಲಿ ಭಾರತ ವಿವಾದಿತ ಬೌದ್ಧ ಧರ್ಮ'ಗುರು ದಲೈಲಾಮಾ'ರನ್ನು ಈ ಪ್ರದೇಶಕ್ಕೆ ಭೇಟಿ ವಿವಾದಿತ ಪ್ರದೇಶ ತನ್ನದೆಂದು ವಾದಿಸುತ್ತಿದೆ' ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ತಿಳಿಸಿದೆ.

ನವದೆಹಲಿ(ಏ.21): ಭಾರತ ಅರುಣಾಚಲಾ ಪ್ರದೇಶ ವಿಷಯದಲ್ಲಿ ದಲೈಲಾಮಾ ಕಾರ್ಡ್ ಬಳಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ' ಎಂದು  ಚೀನಾದ ಸರ್ಕಾರಿ ಸ್ಯಾಮ್ಯದ ಪತ್ರಿಕೆಯಾದ  'ಗ್ಲೋಬಲ್ ಟೈಮ್ಸ್' ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಎಚ್ಚರಿಸಲಾಗಿದೆ.

ಭಾರತ ಹಾಗೂ ಚೀನಾ ನಡುವೆ ಅರುಣಾಚಲ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ಗಡಿ ವಿವಾದದ ಸಮಸ್ಯೆ ಹಲವು ವರ್ಷಗಳಿಂದ ಇದೆ. ಈ ಹಿನ್ನಲೆಯಲ್ಲಿ ಭಾರತ ವಿವಾದಿತ ಬೌದ್ಧ ಧರ್ಮ'ಗುರು ದಲೈಲಾಮಾ'ರನ್ನು ಈ ಪ್ರದೇಶಕ್ಕೆ ಭೇಟಿ ವಿವಾದಿತ ಪ್ರದೇಶ ತನ್ನದೆಂದು ವಾದಿಸುತ್ತಿದೆ' ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ತಿಳಿಸಿದೆ.

ಎರಡೂ ದೇಶಗಳ ಮಧ್ಯ 90 ಸಾವಿರ ಚ.ಕಿ.ಮೀ ಪ್ರದೇಶಕ್ಕೆ ಸಂಬಂಧಿಸಿದಂತೆ ಗಡಿವಿವಾದವಿದೆ. ಚೀನಾ ಅಲ್ಲಿನ ದಕ್ಷಿಣ ಟೆಬಿಟ್ ಪ್ರದೇಶವನ್ನು ತನ್ನದೆಂದು ಬಹುವರ್ಷಗಳಿಂದ ವಾದಿಸುತ್ತಿದೆ. ದಲೈಲಾಮ ಭೇಟಿ ನಂತರ 2 ದಿನಗಳ ಹಿಂದಷ್ಟೆ ವಿವಾದಿತ 6 ಪ್ರದೇಶಗಳಿಗೆ ತನ್ನ ದೇಶದ ಅಧಿಕೃತ ಹೆಸರಿನ್ನಿಟ್ಟಿರುವುದು ವಿವಾದ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.

click me!