
ಬೆಂಗಳೂರು(ಫೆ.18): ವಿಧ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಮೊಹಮ್ಮದ್ ನಲಪಾಡ್ ಅವರನ್ನು ಉಳಿಸಿಕೊಳ್ಳಲು ಶಾಸಕ ಎನ್'ಎ ಹ್ಯಾರಿಸ್ ಮುಂದಾಗಿದ್ದು ಈಗಾಗಲೇ ನಗರದ ಖ್ಯಾತ ಕ್ರಿಮಿನಲ್ ವಕೀಲರೊಬ್ಬರ ಜತೆ ಮಾತುಕತೆ ನಡೆದಿದೆ ಎಂಬ ಮಾಹಿತಿ ಸುವರ್ಣ ನ್ಯೂಸ್'ಗೆ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ನಲಪಾಡ್ ಮೇಲೆ ದಾಖಲಿಸಲಾಗಿರುವ ಪ್ರಕರಣಗಳ ಪೈಕಿ 326 ಹಾಗೂ 506 ಬಿ ಸೆಕ್ಷನ್'ಗೆ ಕೋರ್ಟ್ ಜಾಮೀನು ಅವಶ್ಯಕವಾಗಿರು ಹಿನ್ನಲೆಯಲ್ಲಿ ಹ್ಯಾರಿಸ್ ತಮ್ಮ ಮಗನಿಗೆ ನಿರೀಕ್ಷಣಾ ಜಾಮೀನು ಪಡೆಯಲು ಸಿದ್ದತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ನಲಪಾಡ್ ಮೇಲೆ ಐಪಿಸಿ ಸೆಕ್ಷನ್ 341, 506, 143, 144, 146, 147, 326 ಹಾಗೂ 506ಬಿ ಅನ್ವಯ ಕಬ್ಬನ್'ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಗಳ ಪೈಕಿ 326 ಹಾಗೂ 506 ಬಿ ಸೆಕ್ಷನ್'ಗೆ ನ್ಯಾಯಾಲಯದಲ್ಲೇ ಜಾಮೀನು ಪಡೆಯಬೇಕಿದ್ದು, ಉಳಿದ ಸೆಕ್ಷನ್'ಗಳಿಗೆ ಪೊಲೀಸ್ ಠಾಣೆಯಲ್ಲೇ ಜಾಮೀನು ಸಿಗಲಿದೆ.
ಒಟ್ಟಾರೆ ಶಾಸಕರ ಪುತ್ರನ ಈ ಗೂಂಡಾಗಿರಿ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.