
ಬೆಂಗಳೂರು (ಫೆ.17): ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಹಿಂದೊಮ್ಮೆ ಪ್ರಕಾಶ್ ರೈ ನಲಪಾಡ್’ನನ್ನು ಹೊಗಳಿರುವ ವಿಚಾರ ಮುನ್ನಲೆಗೆ ಬಂದಿದೆ.
ಬೆಂಗಳೂರಿನಲ್ಲಿ ಜನವರಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ನಲಪಾಡ್’ನನ್ನು ಪ್ರಕಾಶ್ ರೈ ಹೊಗಳಿದ್ದರು. ಮಗನನ್ನು ಹೇಗೆ ಬೆಳೆಸಿದ್ದಾರೆ ನೋಡಿ ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಾ ಶಹಬ್ಬಾಸ್ ಎಂದಿದ್ದರು.
ಪೋಡಿಯಂ ಬಳಿ ನಲಪಾಡ್ ಕರೆದು ಬೆನ್ನುತಟ್ಟಿ, ಬೆಳೆಸಿದರೆ ಹೀಗೆ ಬೆಳಸಬೇಕು ಮಕ್ಕಳನ್ನು ಎಂದು ಮೆಚ್ಚುಗೆ ಸೂಚಿಸಿದ್ದರು. ಪ್ರಕಾಶ್ ರಾಜ್ ಫೌಂಡೇಷನ್’ಗೆ ನೆರವಾಗಿದ್ದಕ್ಕೆ ಹಾಗೂ ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುವ ಕೆಲಸಕ್ಕೆ ಅಂದು ಸಹಾಯ ಮಾಡಿದ್ದ ಮೊಹಮ್ಮದ್ ನಲಪಾಡ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅವತ್ತು ಹೊಗಳಿದ್ದು ನಿಜ. ಆದರೆ ಇಂದು ನಲಪಾಡ್ ಮಾಡಿರುವ ಕೃತ್ಯವನ್ನು ಖಂಡಿಸುತ್ತೇನೆ. ಇವರು ಮನುಷ್ಯರಲ್ಲ, ರಾಕ್ಷಸರು. ವಿದ್ವತ್ ದಾಖಲಾಗಿರುವ ಆಸ್ಪತ್ರೆಗೆ ಹೋಗಿ ಮತ್ತೆ ಧಮ್ಕಿ ಹಾಕಿದ್ದು ಅಹಂಕಾರದ ಪರಮಾವಧಿ. ನನಗೆ ಇಂದು ನಿಜವಾಗಿಯೂ ಪಾಠ ಕಲಿತಂತಾಗಿದೆ. ಅಂದು ಆ ಹುಡುಗನಿಗೆ ರೆಕಾರ್ಡ್ ಇತ್ತು. ಆದರೆ ನಾನು ಅದನ್ನು ಗಮನದಲ್ಲಿಟ್ಟುಕೊಂಡಿರಲಿಲ್ಲ. ಅವನ ಸಹಾಯವನ್ನು ಗಮನದಲ್ಲಿಟ್ಟುಕೊಂಡು ಹೊಗಳಿದೆ. ಸಭ್ಯ ಸಮಾಜದಲ್ಲಿ ನಾಗರೀಕರು ಯಾರನ್ನಾದರೂ ಹೊಡೆದು, ತಮ್ಮ ಪವರ್ ತೋರಿಸುವುದನ್ನು ನಾವೆಲ್ಲಾ ಖಂಡಿಸಬೇಕು ಎಂದು ಸುವರ್ಣ ನ್ಯೂಸ್’ಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.