
ಮಡಿಕೇರಿ[ಆ.25] ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ.
ಗೌಡ ಎಂದು ಹೆಸರಿಟ್ಟುಕೊಂಡು ಫೇಸ್ ಬುಕ್ ನಲ್ಲಿ ಒಕ್ಕಲಿಗರು ತಲೆ ತಗ್ಗಿಸುವಂತೆ ಮಾತನಾಡುವವರಿಗೆ ಏನು ಹೇಳಲು ಸಾಧ್ಯ? ಇಡೀ ಸಮಾಜಕ್ಕೆ ಒಂದಷ್ಟು ಜನ ಅವಮಾನ ಮಾಡುತ್ತಿದ್ದೀರಿ. ಫೇಸ್ ಬುಕ್ ಅನ್ನು ಮನೆಯ ಟಾಯ್ಲೆಟ್ ಎಂದು ಅಂದುಕೊಂಡಿದ್ದಾರೆ. ಏನೇನೋ ಹೇಳುತ್ತಿದ್ದಾರೆ. ಇದು ದಾರಿಯಲ್ಲಿ ಹೋಗುವ ಆನೆಯನ್ನು ನೋಡಿ ನಾಯಿ ಬೊಗಳಿದಂತಾಗಿದೆ ಎಂದರು.
ಇಡೀ ಭಾರತವನ್ನೇ ನಡುಗಿಸಿದ್ದ 5 ಭೀಕರ ಪ್ರವಾಹಗಳು
ಹೆಸರಿನ ಮುಂದೆ ಆ ಗೌಡ, ಈ ಗೌಡ ಎಂದು ಹೆಸರು ಇಟ್ಟುಕೊಳ್ಳುತ್ತೀರಾ. ಬಾಯಿ ತೆಗೆದ್ರೆ ಅಕ್ಕ-ಅಮ್ಮ ಎಂದು ಹೊಲಸು ಶಬ್ದಗಳನ್ನು ಫೇಸ್ ಬುಕ್ ಅಲ್ಲಿ ಬೈಯ್ಯ ಬೇಡಿ. ಆ ರೀತಿ ಬೈಯಲೂ ನಮಗೂ ಬರುತ್ತೆ. ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಈ ಜೆಡಿಎಸ್ ಬೆಂಬಲಿಗರು ಈ ರೀತಿ ಪದಗಳನ್ನು ಮಾಡುತ್ತಾರೆ. ಬೇರೆವರ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡುವುದನ್ನು ಮೊದಲು ನಿಲ್ಲಿಸಿ ಅಂತ ಹೇಳಿದ್ದಾರೆ.
ಸಂಕಷ್ಟದಲ್ಲಿರುವ ಕೊಡಗನ್ನು ಕಾಪಾಡಲು ಸಹಾಯ ಮಾಡಿ, ಸಹಕಾರ ಮಾಡಿ.. ಹಿಂದೆ ದೇವೇಗೌಡರು ಮತ್ತು ಕುಮಾರಸ್ವಾಮಿ ವಿವಿಧ ನಾಯಕರ ಬಗ್ಗೆ ಮಾತನಾಡಿದ್ದನ್ನು ಕೇಳಿದ್ದೇವೆ. ನಿಮಗೆ ಅಧಿಕಾರ ಸಿಕ್ಕಿದೆ ಅದನ್ನು ಅನುಭವಿಸಿ, ಜನರಿಗೆ ಒಳ್ಳೆಯ ಕೆಲಸ ಮಾಡಿ.. ಸಾರಾ ಮಹೇಶ್ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಅದನ್ನು ನಾನು ಶ್ಲಾಘಿಸುತ್ತೇನೆ. ಇದನ್ನೆಲ್ಲ ಗಮನಿಸಿ. ರಾಜಕಾರಣ ಬಿಡಿ.. ಒಳ್ಳೆ ಕೆಲಸ ಮಾಡಿ..ಪ್ರತಾಪ್ ಸಿಂಹ ಫೇಸ್ ಬುಕ್ ನೋಡಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.