ಬರ್ಮಾದ ರೋಹಿಂಗ್ಯ ಮುಸ್ಲಿಮರು ದೇಶ ಬಿಟ್ಟು ಓಡಿ ಹೋಗುತ್ತಿರುವುದೇಕೆ? ಬೌದ್ಧರ ವಿಗ್ರಹ ಭಂಜಿಸಿ ಗಡಿ ಮುರಿದು ಓಡಿದ ಉಗ್ರರು..!

Published : Sep 04, 2017, 04:52 PM ISTUpdated : Apr 11, 2018, 01:01 PM IST
ಬರ್ಮಾದ ರೋಹಿಂಗ್ಯ ಮುಸ್ಲಿಮರು ದೇಶ ಬಿಟ್ಟು ಓಡಿ ಹೋಗುತ್ತಿರುವುದೇಕೆ? ಬೌದ್ಧರ ವಿಗ್ರಹ ಭಂಜಿಸಿ ಗಡಿ ಮುರಿದು ಓಡಿದ ಉಗ್ರರು..!

ಸಾರಾಂಶ

ಅರಾಕನ್ ರೋಹಿಂಗ್ಯ ಸಾಲ್ವೇಶನ್ ಆರ್ಮಿ ಎಂಬ ಉಗ್ರ ಸಂಘಟನೆಯು ರಾಖಿನೆ ರಾಜ್ಯದ ಪೊಲೀಸ್ ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಹತ್ತಾರು ಪೊಲೀಸರನ್ನು ಬಲಿತೆಗೆದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳ ನಡೆಸಿದ ಕಾರ್ಯಾಚರಣೆಯಲ್ಲಿ 370 ಉಗ್ರರು ಹತರಾಗಿದ್ದಾರೆ. ಒಟ್ಟಾರೆ 400ಕ್ಕೂ ಹೆಚ್ಚು ಜನರು ಈ ಚಕಮಕಿಯಲ್ಲಿ ಪ್ರಾಣಬಿಟ್ಟಿದ್ದಾರೆ.

ನವದೆಹಲಿ(ಸೆ. 04): ಭಾರತದ ನೆರೆಯ ರಾಷ್ಟ್ರ ಮಯನ್ಮಾರ್ ಕೋಮುದಳ್ಳುರಿಯಲ್ಲಿ ಮತ್ತೆ ಹೊತ್ತಿ ಉರಿಯುತ್ತಿದೆ. ಉಗ್ರರು ಮತ್ತು ಭದ್ರತಾಪಡೆಗಳ ನಡುವಿನ ಕಾಳಗದಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆಂಬ ವರದಿ ಬಂದಿದೆ. ರೋಹಿಂಗ್ಯ ಮುಸ್ಲಿಮರು ನಿರಾಶ್ರಿತರಾಗಿ ಬಾಂಗ್ಲಾದೇಶಕ್ಕೆ ದಂಡುದಂಡಾಗಿ ವಲಸೆ ಹೋಗುತ್ತಿದ್ದಾರೆ. ಮಯನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಭಾಗದಲ್ಲಿರುವ ತಡೆಗೋಡೆಯನ್ನು ಎರಡು ಕಡೆ ಮುರಿದುಹಾಕಿ ಹೊರನುಗ್ಗಿದ್ದಾರೆ. ಅಲ್ಲದೇ, ಗಡಿಭಾಗದಲ್ಲಿರುವ ನಾನ್'ಥಟುವಂಗ್ ಗ್ರಾಮಕ್ಕೆ ನುಗ್ಗಿದ ರೋಹಿಂಗ್ಯ ಉಗ್ರರು 37ಕ್ಕೂ ಹೆಚ್ಚು ಮನೆಗಳನ್ನು ಧ್ವಂಸ ಮಾಡಿದ್ಧಾರೆ. ಊರಿನಲ್ಲಿದ್ದ ಶಾಲೆ ಮತ್ತು ಬೌದ್ಧ ಮಂದಿರಗಳನ್ನು ಧರೆಗುರುಳಿಸಿದ್ದಾರೆ. ಗ್ರಾಮದಲ್ಲಿದ್ದ ಎಲ್ಲಾ ಬೌದ್ಧ ವಿಗ್ರಹಗಳನ್ನು ಭಂಜಿಸಿ ಅಟ್ಟಹಾಸ ಮಾಡಿದ್ದಾರೆ.

ಅರಾಕನ್ ರೋಹಿಂಗ್ಯ ಸಾಲ್ವೇಶನ್ ಆರ್ಮಿ ಎಂಬ ಉಗ್ರ ಸಂಘಟನೆಯು ರಾಖಿನೆ ರಾಜ್ಯದ ಪೊಲೀಸ್ ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಹತ್ತಾರು ಪೊಲೀಸರನ್ನು ಬಲಿತೆಗೆದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳ ನಡೆಸಿದ ಕಾರ್ಯಾಚರಣೆಯಲ್ಲಿ 370 ಉಗ್ರರು ಹತರಾಗಿದ್ದಾರೆ. ಒಟ್ಟಾರೆ 400ಕ್ಕೂ ಹೆಚ್ಚು ಜನರು ಈ ಚಕಮಕಿಯಲ್ಲಿ ಪ್ರಾಣಬಿಟ್ಟಿದ್ದಾರೆ.

ಯಾರಿವರು ರೋಹಿಂಗ್ಯ ಮುಸ್ಲಿಮರು..?
ಬರ್ಮಾ, ಅಥವಾ ಮಯನ್ಮಾರ್'ನ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವಾದ ರೋಹಿಂಗ್ಯರು ಸುಮಾರು 11 ಲಕ್ಷ ಜನಸಂಖ್ಯೆಯಲ್ಲಿದ್ದಾರೆ. ಈ ದೇಶದಲ್ಲಿ ಕಳೆದೊಂದು ಶತಮಾನದಿಂದ ಬೌದ್ಧರು ಮತ್ತು ಮುಸ್ಲಿಮರ ನಡುವೆ ಕೋಮು ತಿಕ್ಕಾಟ ನಡೆದೇ ಇದೆ. 2011ರಿಂದೀಚೆ ಕೋಮುಸಂಘರ್ಷದ ತೀವ್ರತೆ ಹೆಚ್ಚಾಗಿಬಿಟ್ಟಿದೆ. ಕಳೆದೊಂದು ವರ್ಷದಿಂದ ಬೌದ್ಧರ ದಾಳಿಗೆ ಸಿಕ್ಕು ಸುಮಾರು ಒಂದೂವರೆ ಲಕ್ಷ ರೋಹಿಂಗ್ಯ ಮುಸ್ಲಿಮರು ಮಯನ್ಮಾರ್ ಗಡಿ ದಾಟಿ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರ ಸೇರಿದ್ದಾರೆ. ಕಳೆದ 10 ದಿನಗಳಲ್ಲೇ ಹತ್ತಿರಹತ್ತಿರ 1 ಲಕ್ಷದಷ್ಟು ಮುಸ್ಲಿಮರು ದೇಶ ತ್ಯಜಿಸುವಂತಾಗಿದೆ.

ಬಾಂಗ್ಲಾಕ್ಕೂ ತಲೆನೋವು..!
ಬಡತನದಲ್ಲಿ ಬೇಯುತ್ತಿರುವ ಬಾಂಗ್ಲಾದೇಶಕ್ಕೆ ಈಗ ಮಯನ್ಮಾರ್ ಮುಸ್ಲಿಮ್ ನಿರಾಶ್ರಿತರನ್ನು ಸೇರಿಸಿಕೊಳ್ಳುವುದು ತ್ರಾಸದ ಕೆಲಸವಾಗುತ್ತಿದೆ. ರೋಹಿಂಗ್ಯ ಮುಸ್ಲಿಮ್ ನಿರಾಶ್ರಿತರಿಗೆ ಬಾಂಗ್ಲಾ ಗಡಿಭಾಗದಲ್ಲಿ ಸರಿಯಾದ ಚಿಕಿತ್ಸೆ ಸೌಲಭ್ಯಗಳು ಸಿಕ್ಕುತ್ತಿಲ್ಲ. ನೂರಾರು ನಿರಾಶ್ರಿತರು ಆಸ್ಪತ್ರೆಯಿಲ್ಲದೇ ಶಿಬಿರಗಳಲ್ಲೇ ಕೊನೆಯುಸಿರೆಳೆಯುತ್ತಿದ್ದಾರೆ.

ಭಾರತ ಸರಕಾರ ಕೂಡ ಮುಸ್ಲಿಮ್ ನಿರಾಶ್ರಿತರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಬಂದಿರುವ ಕೆಲ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗುತ್ತಿದೆ. ಭಾರತಕ್ಕೆ ಬಂದಿರುವ ಇಬ್ಬರು ರೋಹಿಂಗ್ಯ ಮುಸ್ಲಿಮ್ ವಲಸಿಗರು ಈ ವಿಚಾರದಲ್ಲಿ ಕೇಂದ್ರದ ನಿಲುವನ್ನು ಪ್ರಶ್ನಿಸಿ ಭಾರತೀಯ ಸರ್ವೋಚ್ಚ ನ್ಯಾಯಾಲಯದ ಮೊರೆಹೋಗಿದ್ದಾರೆ. ಮಯನ್ಮಾರ್'ನಲ್ಲಿನ ಹಿಂಸಾಚಾರಗಳಿಂದಾಗಿ ನಿರಾಶ್ರಿತರಾಗಿರುವ ಮುಸ್ಲಿಮರು ಯಾವುದೇ ನೆರೆಯ ರಾಷ್ಟ್ರಕ್ಕೆ ಹೋಗುವ ಸ್ವಾತಂತ್ರ್ಯ ಹೊಂದಿದ್ದಾರೆ. ಭಾರತವು ಈ ವಲಸಿಗರನ್ನು ವಾಪಸ್ ಕಳುಹಿಸುವ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ಮುರಿಯುತ್ತಿದೆ ಎಂದು ಈ ಇಬ್ಬರು ರೋಹಿಂಗ್ಯರು ವಾದಿಸುತ್ತಿದ್ದಾರೆ.

ಮಾಹಿತಿ: ಇಂಡಿಯನ್ ಎಕ್ಸ್'ಪ್ರೆಸ್/ಸ್ಪುಟ್ನಿಕ್ ನ್ಯೂಸ್
(ಫೋಟೋ: ಬಾಂಗ್ಲಾದ ವಲಸಿಗರ ಶಿಬಿರದಲ್ಲಿರುವ ರೋಹಿಂಗ್ಯ ಮುಸ್ಲಿಮರು)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!