
ಯಾಂಗೋನ್[ಮೇ.13]: ಮುಂದಿನ ಚಕ್ರಗಳು ತೆರೆದುಕೊಳ್ಳುವುದರಲ್ಲಿ ವಿಫಲವಾದರೂ ಧೃತಿಗೆಡದ ಪೈಲಟ್, ವಿಮಾನದ ಮೂತಿಯ ಮೇಲೆ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಘಟನೆ ಮ್ಯಾನ್ಮಾರ್‌ನಲ್ಲಿ ಭಾನುವಾರ ನಡೆದಿದೆ.
ಮ್ಯಾನ್ಮಾರನ್ ನ್ಯಾಷನಲ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ತಡಾ- ಯುನ ಮಂಡಾಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ವೇಳೆ, ಗಿಯರ್ ವೈಫಲ್ಯದಿಂದಾಗಿ ಮುಂದಿನ ಚಕ್ರಗಳು ತೆರೆದುಕೊಳ್ಳಲೇ ಇಲ್ಲ. ಆದರೆ ಈ ವೇಳೆ ಧೃತಿಗೆಡದ ಪೈಲಟ್ ವಿಮಾನ ಮೂತಿಯನ್ನೇ ಆಧಾರವಾಗಿ ಬಳಸಿಕೊಂಡು ಯಾವುದೇ ಅನಾಹುತವಾಗದಂತೆ ವಿಮಾನವನ್ನು ಯಶಸ್ವಿಯಾಗಿ ಇಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿಲ್ಲ. ವಿಮಾನದಲ್ಲಿ ಎಷ್ಟುಪ್ರಯಾಣಿಕರು ಇದ್ದರು ಎಂಬುದನ್ನು ವಿಮಾನಯಾನ ಸಂಸ್ಥೆ ಬಹಿರಂಗಪಡಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.