ನನ್ನ ಪಾಲಿಗೆ ತಂದೆ ಅಂದೇ ಸತ್ತು ಹೋದರು, ಕರಾಳ ದಾಳಿಯ ಕತೆ ಬಿಚ್ಚಿಟ್ಟ ಮಾಧವಿ

By Web DeskFirst Published Oct 18, 2018, 5:25 PM IST
Highlights

ಮರ್ಯಾದಾ ದಾಳೀ ಪ್ರಕರಣದ ಸಂತ್ರಸ್ತೆ ಮಾಧವಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೊರಬಂದ ತಕ್ಷಣ ಆಕೆ ಹೇಳಿರುವ ಮಾತುಗಳು ಮನ ಕಲಕುವಂತೆ ಇದೆ.

ಹೈದರಾಬಾದ್[ಅ.18] ಬೇರೆ ಜಾತಿಯ ಹುಡುಗನ ಮದುವೆಯಾಗಿದ್ದಕ್ಕೆ ತನ್ನ ತಂದೆಯಿಂದಲೆ ದಾಳಿಗೆ ತುತ್ತಾಗಿದ್ದ ಮಾಧವಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನನ್ನ ತಂದೆ ನನ್ನ ಪಾಲಿಗೆ ಸತ್ತು ಹೋಗಿದ್ದಾರೆ. ಯಶೋಧಾ ಆಸ್ಪತ್ರೆಯ ವೈದ್ಯರ ಪರಿಶ್ರಮದಿಂದ ನಾನು ಪುನರ್ ಜನ್ಮ ಪಡೆದುಕೊಂಡೆ ಎಂದು ಹೇಳಿದ್ದಾರೆ.

ದಲಿತ ಸಂದೀಪ್ ಎನ್ನುವರನ್ನು ಮದುವೆಯಾಗಿದ್ದಕ್ಕೆ ನನಗೆ ಈ ಕೊಡುಗೆ ಸಿಕ್ಕಿದೆ ಎಂದಿದ್ದಾರೆ. ನಾನು ನನ್ನ ಕಾಲೇಜು ಸರ್ಟಿಫೀಕೇಟ್ ಗಳನ್ನು ಮದುವೆಗೆ ಮುನ್ನ ಮನೆಯಲ್ಲೇ ಇಟ್ಟಿದ್ದೆ. ಅದನ್ನು ನೀಡುತ್ತೇನೆ ಎಂದು ಹೇಳಿದ ತಂದೆ ಒಂದು ಪ್ರದೇಶಕ್ಕೆ ನಮ್ಮನ್ನು ಕರೆಸಿಕೊಂಡಿದ್ದಾರೆ. ಅಲ್ಲಿ ನಮ್ಮಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಅಂದಿನ ಕರಾಳ ಘಟನೆಯನ್ನು ವಿವರಿಸಿದ್ದಾರೆ.

ಹಣ, ಉದ್ಯೋಗ ಏನೂ ಬೇಡ, ತಂದೆಯನ್ನು ಗಲ್ಲಿಗೇರಿಸಿ ಸಾಕು,  ಎಲ್ಲಿಗೆ ಬಂತು ಮರ್ಯಾದಾ ಹತ್ಯೆ

ನಮಗೆ ಇನ್ನೊಮ್ಮೆ ದಾಳಿ ಮಾಡುತ್ತಾರೋ ಎಂಬ ಭಯ ಕಾಡುತ್ತಿದೆ. ಎಂದಿರುವ ಜೋಡಿ ಪೊಲೀಸ್ ಭದ್ರತೆಗೂ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 19 ರಂದು ನಡೆದ ಕರಾಳ ಘಟನೆಯಿಂದ ಇನ್ನು ನಮಗೆ ಹೊರಕ್ಕೆ ಬರಲು ಸಾಧ್ಯವಾಗಿಲ್ಲ. ರಕ್ಷಣೆ ನೀಡಿ ಬೆಂಬಲಕ್ಕೆ ನಿಂತ ಸಮಾಜಕ್ಕೆ ನಮ್ಮ ವಂದನೆ ಎಂದು ನೊಂದ ಜೋಡಿ ಹೇಳಿದೆ.

click me!