ಅ. 21ರಂದು ಕೆಂಪುಕೋಟೆ ಮೇಲೆ ಮೋದಿ ಧ್ವಜಾರೋಹಣ : ಯಾಕೆ..?

By Web DeskFirst Published Oct 18, 2018, 1:52 PM IST
Highlights

ಇದೇ ಮೊದಲ ಬಾರಿಗೆ ದೇಶದಲ್ಲಿ ಆಗಸ್ಟ್ 15ನ್ನು ಬಿಟ್ಟರೆ ದೇಶದಲ್ಲಿ ಕೆಂಪು ಕೋಟೆಯ ಮೇಲೆ ಪ್ರಧಾನಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಾರೆ. 

ನವದೆಹಲಿ :  ಭಾರತ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದು ಮೊದಲು ಜವಹರ್ ಲಾಲ್ ನೆಹರು ಅವರು ಪ್ರಧಾನಿಯಾದಂದಿನಿಂದ ಇಂದಿನವರೆಗೂ ಕೂಡ  ಆಗಸ್ಟ್ 15ರಂದು ಮಾತ್ರವೇ ಕೆಂಪು ಕೋಟೆಯ ಮೇಲೆ ಪ್ರಧಾನಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದರು. 

ಆದರೆ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 21 ರಂದು ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಲಿದ್ದಾರೆ. 

ಇದರಿಂದ ಮೊದಲ ಬಾರಿಗೆ ಪ್ರಧಾನಿಯಿಂದ ಮತ್ತೊಂದು ಧ್ವಜಾರೋಹಣಕ್ಕೆ ಕೆಂಪು ಕೋಟೆ ಸಜ್ಜಾಗುತ್ತಿದೆ. 

ಸುಭಾಷ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಗವರ್ನಮೆಂಟ್ ಗೆ  75 ವರ್ಷ ತುಂಬಿದ ಹಿನ್ನೆಲೆಯಲ್ಲಿ  ಪ್ರಧಾನಿ ಧ್ವಜಾರೋಹಣ ಮಾಡುತ್ತಿದ್ದಾರೆ. 

ಈಗಾಗಲೇ ಅನೇಕ ಜಯಂತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆರಂಭ ಮಾಡಿದ್ದು ಅದರಲ್ಲಿ ಇದೀಗ ಆಜಾದ್ ಹಿಂದ್ ವರ್ಷಾಚರಣೆಯ ಹಿನ್ನೆಲೆ ಧ್ವಜಾರೋಹಣವನ್ನು ಮಾಡಲಾಗುತ್ತಿದೆ. 

click me!