ರಾಜ್ಯದೆಲ್ಲೆಡೆ ರಂಜಾನ್ ಸಂಭ್ರಮ

Published : Jun 25, 2017, 11:09 PM ISTUpdated : Apr 11, 2018, 01:06 PM IST
ರಾಜ್ಯದೆಲ್ಲೆಡೆ ರಂಜಾನ್ ಸಂಭ್ರಮ

ಸಾರಾಂಶ

ಉಡುಪಿಯಲ್ಲೂ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಮುಂಜಾನೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಹೊಸ ಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿ  ಸಂಭ್ರಮಿಸಿದರು.

ಬೆಂಗಳೂರು(ಜೂ.25): ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌  ಆಚರಣೆ ರಾಜ್ಯದೆಲ್ಲೆಡೇ ಆರಂಭವಾಗಿದೆ.ಶ್ರದ್ಧಾ ಭಕ್ತಿಯೊಂದಿಗೆ ಮುಸ್ಲೀಮರು ಸಂಭ್ರಮದಿಂದ  'ಈದ್‌ ಉಲ್‌ ಫಿತರ್ ’ ಆಚರಣೆ ಮಾಡಿದರು.

ಉಪವಾಸದ ನಂತರ ನಿನ್ನೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ರಂಜಾನ್ ಹಬ್ಬ ಆಚರಿಸಿದರು. ನಗರದ ವಿವಿಧ ಮಸೀದಿ, ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಅಲ್ಲಾನಿಗೆ ದುವಾ ಸಲ್ಲಿಸಿದರು. ಪರಸ್ಪರ ಆಲಂಗಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿಯಲ್ಲೂ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಮುಂಜಾನೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಹೊಸ ಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿ  ಸಂಭ್ರಮಿಸಿದರು.

ಇತ್ತ ಕಾರವಾರದಲ್ಲೂ ರಂಜಾನ್ ಹಬ್ಬ ಜೋರಾಗಿತ್ತು. ಭಟ್ಕಳ ನಗರದ ನವಾಯತ್ ಕಾಲೋನಿ, ಮದೀನಾ ಕಾಲೋನಿ, ಮುಗ್ಧಂ ಕಾಲೋನಿ, ಚಿನ್ನದ ಪಳ್ಳಿಯಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇನ್ನೂ  ಕೆಲವೆಡೆ ನಾಳೆ ರಂಜಾನ್ ಆಚರಣೆ ಸಿದ್ಧತೆ ನಡೆದಿದೆ. ಬೆಂಗಳೂರಿನ  ಚಾಮರಾಜಪೇಟೆ ಈದ್ಗಾ ಮೈದಾನ, ಜಯನಗರ  ಮಸೀದಿ ಸೇರಿದಂತೆ ಹಲವೆಡೆ ರಂಜಾನ್ ಆಚರಣೆ ನಡೆಯಲಿದ್ದು ಸಕಲ ರೀತಿಯಲ್ಲೂ ಸಿದ್ಧತೆ ಮಾಡ್ಕೊಂಡಿದ್ದಾರೆ.  ರಸೆಲ್  ಮಾರ್ಕೇಟ್ ಸೇರಿದಂತೆ ಹಲವೆಡೆ ಹಬ್ಬದ ಖರೀದಿ ಜೋರಾಗಿತ್ತು.

ದಾವಣಗೆರೆಯ ಮಿನಿ ಬಜಾರ್​ನಲ್ಲೂ ನಾಳೆಯ ರಂಜಾನ್ ಆಚರಣೆಗೆ  ಖರೀದಿ ಜೋರಾಗಿತ್ತು. ಇನ್ನೂ ಉತ್ತರ ಕರ್ನಾಟಕ ಭಾಗದಲ್ಲೂ ನಾಳೆ ರಂಜಾನ್ ಆಚರಣೆ ಕಳೆಗಟ್ಟಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!