ಸುವರ್ಣನ್ಯೂಸ್ ಕಾರ್ಯಕ್ಕೆ ಸಚಿವ ರೋಷನ್ ಬೇಗ್ ಶ್ಲಾಘನೆ : ಜನತೆಯ ಸಮಸ್ಯೆಗೆ ಸ್ಟುಡಿಯೋದಲ್ಲೇ ಪರಿಹಾರ

Published : Jun 25, 2017, 09:22 PM ISTUpdated : Apr 11, 2018, 01:13 PM IST
ಸುವರ್ಣನ್ಯೂಸ್ ಕಾರ್ಯಕ್ಕೆ ಸಚಿವ ರೋಷನ್ ಬೇಗ್ ಶ್ಲಾಘನೆ :  ಜನತೆಯ ಸಮಸ್ಯೆಗೆ ಸ್ಟುಡಿಯೋದಲ್ಲೇ ಪರಿಹಾರ

ಸಾರಾಂಶ

ಬೆಳಗಾವಿಯಿಂದ ಸಂತೋಷ್ ಎಂಬುವರು ಕರೆ ಮಾಡಿ,  ಕಾವೇರಿ ನಗರ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಲೋಕಾಯುಕ್ತಕ್ಕೂ ದೂರು ನೀಡಿದ್ದು, ಅಭಿವೃದ್ಧಿಗೆ ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ  ಎಂದಾಗ,15 ದಿನಗಳೊಳಗೆ ಖುದ್ದು ತಾವೇ ಬಂದು ಪರಿಶೀಲಿಸೋದಾಗಿ ಸಚಿವರು ಭರವಸೆ ನೀಡಿದರು.

ಬೆಂಗಳೂರು(ಜೂ.25): ಹಲೋ ಮಿನಿಸ್ಟರ್.... ಸುವರ್ಣ ನ್ಯೂಸ್​​​​ನ ನೂತನ ಮತ್ತು ವಿಭಿನ್ನ ಪ್ರಯತ್ನಕ್ಕೆ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇವತ್ತು ಅತಿಥಿಯಾಗಿ ನಗರಾಭಿವೃದ್ಧಿ ಮತ್ತು ಹಜ್​ ಸಚಿವ ರೋಷನ್ ಬೇಗ್  ಆಗಮಿಸಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಸಚಿವರು ಮತ್ತು ಸಮಾಧಾನಕರ ಉತ್ತರ ನೀಡಿದರು.

ಬೆಳಗಾವಿಯಿಂದ ಸಂತೋಷ್ ಎಂಬುವರು ಕರೆ ಮಾಡಿ,  ಕಾವೇರಿ ನಗರ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಲೋಕಾಯುಕ್ತಕ್ಕೂ ದೂರು ನೀಡಿದ್ದು, ಅಭಿವೃದ್ಧಿಗೆ ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ  ಎಂದಾಗ,15 ದಿನಗಳೊಳಗೆ ಖುದ್ದು ತಾವೇ ಬಂದು ಪರಿಶೀಲಿಸೋದಾಗಿ ಸಚಿವರು ಭರವಸೆ ನೀಡಿದರು.

ಇನ್ನೂ SUDAದಿಂದ 2014ರಲ್ಲಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆಯಲ್ಲಿನ ಹಗರಣ ನಡೆದಿದ್ದನ್ನು ಸುವರ್ಣ ನ್ಯೂಸ್ ಬಹಿರಂಗ ಪಡಿಸಿತ್ತು. ಇದುವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ  ಎಂದು ಶಿವಮೊಗ್ಗದಿಂದ ಶ್ರೀಧರ್ ಎಂಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೀತಿದೆ, ವರದಿ ಬಳಿಕ ಕ್ರಮ ಕೈಗೊಳ್ಳೋ ಭರವಸೆ ನೀಡಿದರು.

ಇದಲ್ಲದೇ ಚಿಕ್ಕಮಗಳೂರಲ್ಲಿ ಭೂಮಿ ಕೊಟ್ಟವರಿಗೆ ಪರಿಹಾರ ಸಿಕ್ಕಿಲ್ಲ.. ಅರ್ಜಿದಾರರಿಗೆ ನಿವೇಶನವೂ ಹಂಚಿಕೆಯಾಗಿಲ್ಲ.. ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ 15 ವರ್ಷಗಳಿಂದ ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ. ಹೀಗೆ ಹಲವು ದೂರುಗಳು ಬಂದವು. ಎಲ್ಲದಕ್ಕೂ ಸಮರ್ಪಕ ಉತ್ತರ ನೀಡಿದ ಸಚಿವರು, ತಮ್ಮ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆಯೂ ವಿವರ ನೀಡಿದರು. ಅಲ್ಲದೇ ಸುವರ್ಣ ನ್ಯೂಸ್ ವಿಭಿನ್ನ ಕಾರ್ಯಕ್ರಮಕ್ಕೂ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!