ದೊಡ್ಡಣ್ಣನ ಶ್ರೀರಕ್ಷೆ : ಮೋದಿಗೆ ರಾಖಿ ಕಳುಹಿಸಿದ ಮುಸ್ಲಿಂ ಮಹಿಳೆಯರು!

By Web DeskFirst Published Aug 12, 2019, 1:49 PM IST
Highlights

ಹಿರಿಯಣ್ಣ ಪ್ರಧಾನಿ ಮೋದಿ ಅವರಿಗೆ ಮುಸ್ಲಿಂ ಸಹೋದರಿಯರಿಂದ ರಾಖಿ| ಮೋದಿ ಭಾವಚಿತ್ರವುಳ್ಳ ರಾಖಿ ಕಳುಹಿಸಿದ ಮುಸ್ಲಿಂ ಮಹಿಳೆಯರು| ತ್ರಿವಳಿ ತಲಾಖ್ ನಿಷೇಧ ಮಸೂದೆ ಐತಿಹಾಸಿಕ ಎಂದ ಮುಸ್ಲಿಂ ಸಹೋದರಿಯರು| ಪ್ರಧಾನಿ ಮೋದಿ ನಮ್ಮೆಲ್ಲರ ಪಾಲಿನ ಹಿರಿಯಣ್ಣ ಅಂತಾರೆ ಮುಸ್ಲಿಂ ಮಹಿಳೆಯರು| 

ವಾರಾಣಸಿ(ಆ.12): ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಸಮುದಾಯದ ಮಹಿಳೆಯರ ಗೌರವಕ್ಕೆ ಪಾತ್ರರಾಗಿದ್ದಾರೆ.

ತ್ರಿವಳಿ ತಲಾಖ್’ನ್ನು ನಿಷೇಧಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಮೇಲಾಗುತ್ತಿದ್ದ ಐತಿಹಾಸಿಕ ಅನ್ಯಾಯವನ್ನು ಪ್ರಧಾನಿ ಮೋದಿ ಸರ್ಕಾರ ಸರಿಪಡಿಸಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಹೋದರಿಯರು ಪ್ರಧಾನಿ ಮೋದಿ ಅವರಲ್ಲಿ ತಮ್ಮ ಹಿರಿಯಣ್ಣನನ್ನು ಕಾಣುತ್ತಿದ್ದಾರೆ.

ಅದರಂತೆ ಇದೇ ಆ.15 ರಂದು ದೇಶಾದ್ಯಂತ ರಾಖಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಯ ಮುಸ್ಲಿಂ ಮಹಿಳೆಯರು ಪ್ರಧಾನಿಗೆ ರಾಖಿ ಕಳುಹಿಸಿದ್ದಾರೆ.

ಪ್ರಧಾನಿ ಮೋದಿ ಭಾವಚಿತ್ರ ಇರುವ ರಾಖಿ ತಯಾರಿಸಿರುವ ಮುಸ್ಲಿಂ ಸಹೋದರಿಯರು, ಅದನ್ನು ಮೋದಿ ಕಚೇರಿಗೆ ಕಳುಹಿಸಿ ಕೊಡುವ ತಮ್ಮ ಹಿರಿಯಣ್ಣನಿಗೆ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹುಮಾ ಬಾನೋ, ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರ  ಜೀವನ ಬದಲಿಸಿದ ಪ್ರಧಾನಿ ಮೋದಿ ನಮ್ಮೆಲ್ಲರ ಹಿರಿಯಣ್ಣ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

click me!