
ಚೆನ್ನೈ: ರಾಮೇಶ್ವರದಲ್ಲಿರುವ ಅಬ್ದುಲ್ ಕಲಾಂ ಸ್ಮಾರಕದಲ್ಲಿ ಪ್ರತಿಮೆಯ ಮುಂದೆ ಭಗವದ್ಗೀತೆಯನ್ನು ಇಟ್ಟಿದ್ದ ವಿವಾದ ತಣ್ಣಗಾಗುವ ಮುನ್ನವೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಮುಸ್ಲಿಂ ಪರ ಗುಂಪೊಂದು ಅಬ್ದುಲ್ ಕಲಾಂ ಮುಸ್ಲಿಂ ವ್ಯಕ್ತಿಯೇ ಅಲ್ಲ ಎಂಬ ಆಘಾತಕಾರಿ ಹೇಳಿಕೆ ನೀಡಿದೆ.
ತಮಿಳುನಾಡು ತೌಹೀದ್ ಜಮಾತ್ ಸಂಘಟನೆಯ ಮುಖಂಡ ಜೈನಲಬ್ಬೀನ್, ಕಲಾಂ ಅವರೊಬ್ಬ ಮುಸ್ಲಿಂ ಅಲ್ಲ. ನಗ್ನ ಸನ್ಯಾಸಿಗಳಿಗೆ ಮತ್ತು ಮೂರ್ತಿಗಳಿಗೆ ಅವರು ಪೂಜೆ ಮಾಡುತ್ತಿದ್ದರು. ರಾಷ್ಟ್ರಪತಿಯಾಗುವುದಕ್ಕೂ ಮುನ್ನ ಕಲಾಂ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿರಲಿಲ್ಲ. ವಿಜ್ಞಾನಿಗಳ ಗುಂಪಿನಲ್ಲಿ ಕಲಾಂ ಅವರೊಬ್ಬ ಸಾಮಾನ್ಯ ವಿಜ್ಞಾನಿಯಷ್ಟೇ. ಬಿಜೆಪಿ ಮತ್ತು ಸಂಘಪರಿವಾರ ಕಲಾಂ ಅವರನ್ನು ಗುರುತಿಸಿತು. ಶಂಕರಾಚಾರ್ಯರಿಂದ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಅಥವಾ ಮೂರ್ತಿಪೂಜೆಗೆ ಕಲಾಂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಕಲಾಂ ಅವರು ಕೇವಲ ಮುಸ್ಲಿಂ ಹೆಸರನ್ನಷ್ಟೇ ಹೊಂದಿದ್ದಾರೆ. ಹೀಗಾಗಿ ಸ್ಮಾರಕದಲ್ಲಿ ಕುರಾನ್ ಅನ್ನು ಇಡದೇ ಇರುವುದಕ್ಕೆ ನಾವು ಪ್ರತಿಭಟಿಸುವುದಿಲ್ಲ ಎಂದು ಹೇಳಿದ್ದಾರೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.