ಹನುಮಂತನ ಕಾಲಿಗೆ ಬೀಳಿಸಿಕೊಂಡ ಹುಬ್ಬಳ್ಳಿಯ ನದಾಫ್ ಆರೆಸ್ಟ್

By Web DeskFirst Published Sep 6, 2018, 5:18 PM IST
Highlights

ಮಕ್ಕಳ ಮೇಲಿನ ಕ್ರೌರ್ಯ, ರಕ್ತ ಸಿಕ್ತ ಚಿತ್ರಗಳು ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಫೋಟೋ ಆಡಿಯೋ ಸೇರಿದಂತೆ ಅನೇಕ ವಚಾರಗಳನ್ನು ಫೇಸ್ ಬುಕ್ ತನ್ನ ಗೋಡೆಯಿಂದ ತೆಗೆದುಹಾಕುವ ನಿರಂತರ ಕೆಲಸ ಮಾಡಿಕಕೊಂಡೆ ಬಂದಿದೆ. ಆದರೂ ಕೆಲ ಕಿಡಿಗೇಡಡಿಗಳು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ, ದೇವರುಗಳನ್ನು ಅವಹೇಳನ ಮಾಡುವ ಚಿತ್ರಗಳನ್ನು ಹಾಕಿಕೊಳ್ಳುತ್ತಾರೆ. ಇದು ಸೈಬರ್ ಅಪರಾಧ ಎಂದು ಪರಿಗಣನೆಗೆ ಒಳಗಾಗುತ್ತದೆ. ಇದೀಗ ಹುಬ್ಬಳ್ಳಿಯಿಂದ ಅಂತದ್ದೇ ಒಂದು ಸುದ್ದಿ ಬಂದಿದೆ.

ಹುಬ್ಬಳ್ಳಿ(ಸೆ.6) ಧಾರ್ಮಿಕ ಭಾವನೆ ಕೆರಳಿಸುವ ರೀತಿಯಲ್ಲಿ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೋಲಿಸರು ಶರೀಫ್ ಸಾಬ್ ರಾಜೇಸಾಬ್ ನದಾಫ್ ಎಂಬಾತನನ್ನು ಧಾರ್ಮಿಕ ಭಾವನೆ ಕೆಳಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಹಿಂದುಗಳು ಶ್ರೇಷ್ಠ ಸ್ಥಾನ ನೀಡುವ ಹನುಮಂತ ದೇವರನ್ನು ತನ್ನ ಕಾಲಿಗೆ ಬೀಳಿಸಿಕೊಳ್ಳುವ ರೀತಿಯ ಚಿತ್ರವನ್ನು ಆಧುನಿಕ ಅಪ್ಲಿಕೇಶನ್ ಬಳಸಿ ಚಿತ್ರಿಸಿಕೊಂಡಿದ್ದಾನೆ. ಸಾರ್ವಜನಿಕರು ನೀಡಿದ ಮಾಹಿತಿ ಮೇಲೆ ಪೋಲಿಸರು ಸ್ವತಃ ಪ್ರಕರಣ ದಾಖಲಿಸಿಕೊಂಡು ಈ ಕ್ರಮ ಕೈಗೊಂಡಿದ್ದಾರೆ. 

ಹಾಗಾದರೆ ಸೋಶಿಯಲ್ ಮೀಡಿಯಾದಲ್ಲಿ ಏನು ಬೇಕಾದರೂ ಅಪ್ ಲೋಡ್ ಮಾಡಬಹುದು? ಇದಕ್ಕೆ ಯಾರ ಹಿಡಿತಡೆಯೂ ಇಲ್ಲವೇ? ಅಥವಾ ಇಂಥ ಅಸಂಬದ್ಧ ಚಿತ್ರಗಳ ಪೋಸ್ಟ್ ಮಾಡುವಾಗ ಏನಾದರೂ ಸೂಚನೆಗಳು ಬರುತ್ತವೆಯೇ? ಸೋಶಿಯಲ್ ಮೀಡಿಯಾ ತಜ್ಞರೇ ಉತ್ತರಿಸಬೇಕು.

 

click me!