
ಶಿವಮೊಗ್ಗ(ಏ.12): ಇದು ಇಡೀ ರಾಜ್ಯವೇ ಬೆಚ್ಚಿಬೀಳುವ ಸುದ್ದಿ ಕರ್ನಾಟಕದ ಪ್ರತಿಷ್ಠಿತ ಮಠದಲ್ಲಿ ನಡೆದಿದೆ. ಇದರಿಂದ ಮಠದ ಭಕ್ತರಿಗೆ ಶಾಕ್ ಹಾಗೂ ರಾಜ್ಯದ ಜನತೆಗೆ ಆಘಾತವಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪ್ರಸಿದ್ಧ ಮೂಲೆಗದ್ದೆ ಮಠದಲ್ಲಿ 3 ವರ್ಷದ ಸೃಜನ್ ಎಂಬ ಪುಟ್ಟ ಬಾಲಕನನ್ನು ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದ ನಂತರ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಉತ್ತರಾಧಿಕಾರಿಯ ಪಟ್ಟಾಭಿಷೇಕಕ್ಕೆ ಮುನ್ನ ಬಾಲಕನ ಹತ್ಯೆಯಾಗಿದೆ.40 ವರ್ಷದ ಇತಿಹಾಸ ಹೊಂದಿರುವ ಮೂಲಗದ್ದೆ ಮಠ
ಈ ತಿಂಗಳ ಕೊನೆಯಲ್ಲಿ ಶಾಂತಕುಮಾರ ದೇಶಿಕೇಂದ್ರ ಸ್ವಾಮೀಜಿ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೆದಿತ್ತು. ಹಿರಿಯ ಸಿದ್ಧಲಿಂಗಸ್ವಾಮೀಜಿ ತಂಗಿ ರೇಣುಕಮ್ಮನ ಮೊಮ್ಮಗ 3 ವರ್ಷದ ಸೃಜನ್ ಕೊಲೆ ಮಾಡಲಾಗಿದೆ. ಮಠದಲ್ಲಿ ಉಸ್ತುವಾರಿ ಕೆಲಸ ಮಾಡುತ್ತಿದ್ದ ಸಿದ್ಧಲಿಂಗ ಸ್ವಾಮೀಜಿ ಅವರ ಸಂಬಂಧಿ ರುದ್ರೇಶ್ ಎಂಬ ಯುವಕ ಕೊಲೆ ಮಾಡಿದ್ದಾನೆ. ಮಠದಲ್ಲಿ ಕಳವು ಮಾಡಿ ಸಿಕ್ಕಿಬಿದ್ದ ಕಾರಣ ಸೃಜನ್ ಸಂಬಂಧಿ ರೇಣುಕಮ್ಮನ ವಿರುದ್ಧ ಕಿಡಿ ಕಾರುತ್ತಿದ್ದ.
ಇತ್ತೀಚಿಗಷ್ಟೆ ರೇಣುಕಮ್ಮನ ಮಗಳು ಚೈತ್ರ, ಪುಣೆಯಿಂದ ತನ್ನ 3 ವರ್ಷದ ಮಗ ಸೃಜನ್ ಜತೆ ಉತ್ತರಾಧಿಕಾರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಠಕ್ಕೆ ಆಗಮಿಸಿದ್ದಳು. ಇದೇ ಸಮಯದಲ್ಲಿ ರೇಣುಕಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ರುದ್ರೇಶ್ ನಿದ್ರೆ ಮಾತ್ರೆ ಬೆರಸಿ ಕೊಲೆ ಮಾಡಿ ಮಗುವನ್ನು ನೀರಿಗೆ ಎಸೆದಿದ್ದ. ನಿನ್ನೆ ಬೆಳಗ್ಗೆ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.