ಸೂರ್ಯನಿಗೆ ಕೇಳಿಸಲಿದೆ ಮುಂಡರಗಿ ಹುಡುಗರ ಹೆಸರು

First Published May 28, 2018, 12:50 PM IST
Highlights

ಅಮೆರಿಕದ ನಾಸಾದಿಂದ ಸೂರ್ಯನ ಅಧ್ಯಯನಕ್ಕಾಗಿ ಜುಲೈನಲ್ಲಿ ಉಡಾವಣೆ ಮಾಡಲಿರುವ ಪಾರ್ಕರ್ ನೌಕೆ ಮೇಲೆ ದಾಖಲಿಸಲು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಇಬ್ಬರು ವಿದ್ಯಾರ್ಥಿಗಳ ಹೆಸರು ಆಯ್ಕೆಯಾಗಿದೆ.

ಮುಂಡರಗಿ(ಮೇ 28): ಅಮೆರಿಕದ ನಾಸಾದಿಂದ ಸೂರ್ಯನ ಅಧ್ಯಯನಕ್ಕಾಗಿ ಜುಲೈನಲ್ಲಿ ಉಡಾವಣೆ ಮಾಡಲಿರುವ ಪಾರ್ಕರ್ ನೌಕೆ ಮೇಲೆ ದಾಖಲಿಸಲು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಇಬ್ಬರು ವಿದ್ಯಾರ್ಥಿಗಳ ಹೆಸರು ಆಯ್ಕೆಯಾಗಿದೆ. 

ಮುಂಡರಗಿ ಪಟ್ಟಣದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಮಹಾಗಣಪತಿ ಬಿಳಿಮಗ್ಗದ ಹಾಗೂ ರಾಮನಗೌಡ ಮೂಗನೂರ ಅವರ ಹೆಸರು ನಾಸಾದ ಪಾರ್ಕರ್ ನೌಕೆ ಮೇಲೆ ಬರೆಯಲು ಆಯ್ಕೆಯಾಗಿವೆ. ಪಾರ್ಕರ್ ನೌಕೆ ಮೇಲೆ ತಮ್ಮ ಹೆಸರು ಬರೆಯಲು ಜಗತ್ತಿನಾದ್ಯಂತ ನಾಸಾ ಸಂಸ್ಥೆ ಸಾರ್ವಜನಿಕರಿಂದ ಹೆಸರುಗಳನ್ನು ಆಹ್ವಾನಿಸಿತ್ತು. 

ಆಯ್ಕೆಯಾದವರ ಹೆಸರನ್ನು ಸೂರ್ಯನ ಅಧ್ಯಯನಕ್ಕೆ ಕಳಿಸುವ ನೌಕೆಯ ಮೆಮೊರಿ ಚಿಪ್ಪಿನಲ್ಲಿ ದಾಖಲಿಸಿ ಉಡಾವಣೆ ಮಾಡ ಲಾಗುತ್ತದೆ. ಈಗಾಗಲೇ ಒಟ್ಟು 11,37,202 ಜನ ಈ ನೌಕೆ ಮೇಲೆ ಬರೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

click me!