
ಮುಂಬೈ[ಏ.17]: ಮುಂಬೈ ಪೊಲೀಸ್ ಇಲಾಖೆಯು ಮಹಿಳಾ ಪೊಲೀಸ್ ಸಿಬ್ಬಂದಿಗಾಗಿ ನೂತನ ಹಾಗೂ ಅತ್ಯುತ್ತಮ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಪೊಲೀಸ್ ಕಲ್ಯಾಣ ಯೋಜನೆಯಡಿಯಲ್ಲಿ ಇಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ನ್ನು ಅಳವಡಿಸಿದೆ.
ಮುಂಬೈ ಪೊಲೀಸ್ ಇಲಾಖೆಯು NGO ಒಂದರ ಸಹಯೋಗದೊಂದಿಗೆ ಮಹಿಳಾ ಸಿಬ್ಬಂದಿಗಳ ಸಹಾಯಕ್ಕಾಗಿ ಈ ನೂತನ ವ್ಯವಸ್ಥೆ ಜಾರಿಗೊಳಿಸಿದೆ. ಮುಂಬೈ ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ಅಳವಡಿಸುವ ಮೂಲಕ ಮಹಿಳಾ ಪೊಲೀಸರಲ್ಲಿ ಮತ್ತಷ್ಟು ವಿಶ್ವಾಸ ಹೆಚ್ಚಿಸಿದೆ. ಈ ಮೊದಲು ಕೇಂದ್ರ ಪೊಲೀಸ್ ಕಚೇರಿಯಲ್ಲಿ ಇಂತಹ ಮಷೀನ್ ಅಳವಡಿಸಲಾಗಿತ್ತು. ಆದರೀಗ ಇದನ್ನು ಎಲ್ಲಾ ಪೊಲೀಸ್ ಠಾಣೆಯಲ್ಲಿ ಪರಿಚಯಿಸಲಾಗಿದೆ. ಮುಂಬೈ ಪೊಲೀಸ್ ಆಯುಕ್ತರು ಹಾಗೂ ಅವರ ಪತ್ನಿ ಈ ನೂತನ ವ್ಯವಸ್ಥೆಯನ್ನು ಉದ್ಘಾಟಿಸಿದ್ದಾರೆ.
ಯೋಜನೆ ಉದ್ಘಾಟಿಸಿ ಮಾತನಾಡಿದ ಡೆಪ್ಯುಟಿ ಪೊಲೀಸ್ ಕಮಿಷನರ್ ನಿಯತಿ ಠಾಕೂರ್ 'ಮುಂಬೈನ ಪೊಲೀಸ್ ಇಲಾಖೆಯಲ್ಲಿ ಶೇ. 20ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ. ಮಹಿಳೆಯರು ಮುಟ್ಟಾಗುವುದು ಸಾಮಾನ್ಯ, ಇದೊಂದು ನೈಸರ್ಗಿಕ ಕ್ರಿಯೆ. ಕೆಲವೊಂದು ಬಾರಿ ಅಂದುಕೊಂಡ ಅಮಯಕ್ಕೆ ಮುಟ್ಟಾಗುವುದಿಲ್ಲ ಹೀಗಿರುವಾಗ ಕೆಲಸ ಮಾಡುವ ಸ್ಥಳದಲ್ಲಿ ಇಂತಹ ಮೂಲಭೂತ ವ್ಯವಸ್ಥೆ ಕಲ್ಪಿಸುವುದು ಒಂದು ಅತ್ಯುತ್ತಮ ಬೆಳವಣಿಗೆ' ಎಂದಿದ್ದಾರೆ.
'ಸ್ಮಾರ್ಟ್ ಮ್ಯಾಟ್ರಿನ್' ಯೋಜನೆಯಡಿ ಆರಂಭಿಸಲಾಗಿರುವ ಈ ನೂತನ ವ್ಯವಸ್ಥೆಯಲ್ಲಿ 140 ಸ್ಯಾನಿಟರಿ ಪ್ಯಾಡ್ ಮಷೀನ್ ಗಳನ್ನು ಮುಂಬೈ ನಗರದ 93 ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.