ಜಾನ್ಹವಿ 'ಧಡಕ್' ಫೋಟೋ ಪೊಲೀಸ್ ಇಲಾಖೆ 'ಖಡಕ್' ಬಳಕೆ..!

Published : Jun 22, 2018, 03:50 PM IST
ಜಾನ್ಹವಿ 'ಧಡಕ್' ಫೋಟೋ ಪೊಲೀಸ್ ಇಲಾಖೆ 'ಖಡಕ್' ಬಳಕೆ..!

ಸಾರಾಂಶ

ಜಾನ್ಹವಿ 'ಧಡಕ್' ಫೋಟೋ ಪೊಲೀಸ್ ಇಲಾಖೆ 'ಖಡಕ್' ಬಳಕೆ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಅಭಿನಯದ ಚಿತ್ರ ಚಿತ್ರದ ದೃಶ್ಯವೊಂದರ ಫೋಟೋ ಬಳಸಿಕೊಂಡ ಪೊಲೀಸ್ ಇಲಾಖೆ ಟ್ರಾಪಿಕ್ ಜಾಗೃತಿ ಮೂಡಿಸಲು ಜಾನ್ಹವಿ ಡೈಲಾಗ್ ಬಳಕೆ

ಮುಂಬೈ(ಜೂ.22): ಬಾಲಿವುಡ್ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಅಭಿನಯದ 'ಧಡಕ್' ಚಿತ್ರ ಇನ್ನೂ ತೆರೆ ಮೇಲೆ ಬರಬೇಕಿದೆ. ಆದರೆ ಮುಂಬೈ ಟ್ರಾಫಿಕ್ ಪೊಲೀಸ್ ಈ ಚಿತ್ರದ ದೃಶ್ಯವೊಂದನ್ನು ಟ್ರಾಫಿಕ್ ಜಾಗೃತಿ ಮೂಡಿಸಲು ಬಳಕೆ ಮಾಡಿಕೊಂಡಿದೆ.

ಹೌದು, ಜಾನ್ಹವಿ ಅಭಿನಯದ 'ಧಡಕ್' ಚಿತ್ರದ ದೃಶ್ಯವೊಂದನ್ನು ಎಡಿಟ್ ಮಾಡಿರುವ ಮುಂಬೈ ಪೊಲೀಸ್ ಇಲಾಖೆ ಜಾನ್ಹವಿ ಮುಖದ ಮುಂದೆ ಟ್ರಾಫಿಕ್ ಸಿಗ್ನಲ್ ಫೋಟೋ ಹಾಕಿದೆ. ಚಿತ್ರದಲ್ಲಿ ಜಾನ್ಹವಿ ಹೇಳುವ ಡೈಲಾಗ್‌ನ್ನು ಫೋಟೋಗೆ ಟ್ಯಾಗ್ ಮಾಡಲಾಗಿದ್ದು, ಮುಂಬೈ ಪೊಲೀಸ್ ಅಧಿಕೃತ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿಲಾಗಿದೆ.

ಜನರಲ್ಲಿ ಟ್ರಾಫಿಕ್ ಜಾಗೃತಿ ಮೂಡಿಸಲು ಈ ರೀತಿ ಫೋಟೋ ಬಳಕೆ ಮಾಢಿಕೊಂಡಿರುವುದಾಗಿ ಇಲಾಖೆ ತಿಳಿಸಿದೆ. ಟ್ರಾಫಿಕ್ ಸಿಗ್ನಲ್‌ಗಳನ್ನು ಲೆಕ್ಕಿಸದೆ ಬೇಕಾಬಿಟ್ಟಿ ವಾಹನ ಚಲಾಯಿಸುವವರಿಗೆ ಈ ಫೋಟೋ ಪಾಠವಾದರೆ ಸಾರ್ಥಕ ಎಂದು ಇಲಾಖೆ ಟ್ವಿಟ್ ಮಾಡಿದೆ.

ಇನ್ನು ಟ್ರಾಫಿಕ್ ಜಾಗೃತಿ ಮೂಡಿಸಲು ಜಾನ್ಹವಿ ಕಪೂರ್ ಫೋಟೋ ಬಳಸಿಕೊಂಡ ಮುಂಬೈ ಪೊಲೀಸ್ ಇಲಾಖೆಯ ಕ್ರಮ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಜಾನ್ಹವಿ ಅವರು ಚಿತ್ರದಲ್ಲಿ ಹೇಳುವ ಡೈಲಾಗ್ ಜನರನ್ನು ತಲುಪುವುದರಲ್ಲಿ ಸಂದೇಹವೇ ಇಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ