ಸೌಂಡ್‌ ಇಟ್ಟು ಪೋರ್ನ್ ನೋಡ್ತಿದ್ದ ಗೃಹಸ್ಥನಿಗೆ ಸಿಕ್ಕ ಬಹುಮಾನ!

Published : Nov 21, 2018, 06:38 PM ISTUpdated : Nov 21, 2018, 06:43 PM IST
ಸೌಂಡ್‌ ಇಟ್ಟು ಪೋರ್ನ್ ನೋಡ್ತಿದ್ದ ಗೃಹಸ್ಥನಿಗೆ ಸಿಕ್ಕ ಬಹುಮಾನ!

ಸಾರಾಂಶ

ಒಂದು ಕಡೆ ಕೇಂದ್ರ ಸರಕಾರ ಪೋರ್ನ್ ಸೈಟ್ ಗಳ ಬ್ಯಾನ್ ಮಾಡುತ್ತೇನೆ ಎಂದು ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಪೋರ್ನ್ ನೋಡಿದ್ದಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ. ಸುಮ್ಮನೆ ನಾಲ್ಕು ಗೋಡೆ ನಡುವೆ ನೀಲಿ ಚಿತ್ರ ವೀಕ್ಷಣೆ ಮಾಡಿದ್ದರೆ ಗೃಹಸ್ಥ ಜೈಲು ಸೇರಬೇಕಾಗಿ ಬರುತ್ತಿರಲಿಲ್ಲ.

ಮುಂಬೈ[ನ.21] ಸ್ಪೀಕರ್‌ ಅಳವಡಿಕೆ ಮಾಡಿ ನೀಲಿ ಚಿತ್ರ ನೋಡುತ್ತಿದ್ದವನನ್ನು ಅಕ್ಕ ಪಕ್ಕದವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿ ಪಶ್ಚಿಮದ ವರ್ಷಾ ಅಪಾರ್ಟಮೆಂಟ್ ನಿವಾಸಿ ಮನೋಜ್ ಗುಪ್ತಾ (29) ಬಂಧಿತ ಆರೋಪಿ. ಈ ಕುರಿತು ಮಾಣಿಕ್‍ಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋರ್ನ್.. ಅಲ್ಲಿ ಓಪನ್ ಆಗದಿದ್ದರೇನು.. ಇಲ್ಲಿ ಆಗ್ತಿದೆ!

ವಸಾಯಿ ಪಶ್ಚಿಮದ ವರ್ಷಾ ಅಪಾರ್ಟ್‍ಮೆಂಟ್‍ನಲ್ಲಿ ಪತ್ನಿ, ಮಕ್ಕಳ ಜೊತೆಗೆ ಮನೋಜ್ ಗುಪ್ತಾ ಅಜ್ಜನ ಮನೆಯಲ್ಲಿ ವಾಸವಾಗಿದ್ದ. ಆದರೆ ಮನೋಜ್ ತನ್ನ ನೆರೆಹೊರೆಯವರ ಜೊತೆಗೆ ಕಳೆದ ಕೆಲವು ತಿಂಗಳಿಂದ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ಅದೇ ಅಪಾರ್ಟಮೆಂಟ್‍ನ 30 ವರ್ಷದ ಮಹಿಳೆ ಜೊತೆಗೂ ಅನುಚಿತವಾಗಿ ವರ್ತಿಸಿದ್ದಾನೆ. ಮಹಿಳೆಯರಿಗೆ ಸನ್ನೆ ಮಾಡಿ ಕರೆಯುತ್ತಿದ್ದ. 

ಮಧ್ಯರಾತ್ರಿ ವೇಳೆಗೆ ದೊಡ್ಡದಾಗಿ ಸೌಂಡ್ ಇಟ್ಟುಕೊಂಡು ನೀಲಿ ಚಿತ್ರ ನೋಡುತ್ತಿದ್ದ. ಇವನ ಕಾಟ ತಾಳಲಾರದೆ ಅಕ್ಕಪಕ್ಕದವಎಉ ದೂರು ನೀಡಿದ ನಂತರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್