ಶಿವಾಜಿ ಟರ್ಮಿನಲ್ ಸ್ವಯಂ ಸೇವಾ ತಂತ್ರಜ್ಞಾನ' ಅಳವಡಿಸಿಕೊಂಡಿರುವ ದೇಶದ ಮೊದಲ ವಿಮಾನ ನಿಲ್ದಾಣ

By Suvarna Web DeskFirst Published Dec 15, 2016, 12:30 PM IST
Highlights

ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನನಿಲ್ದಾಣವು  ಸ್ವಯಂ ಸೇವಾ ತಂತ್ರಜ್ಞಾನವನ್ನು ಪರಿಚಯಿಸಿದ ಭಾರತದ ಮೊದಲ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈ (ಡಿ.15): ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನನಿಲ್ದಾಣವು  ಸ್ವಯಂ ಸೇವಾ ತಂತ್ರಜ್ಞಾನವನ್ನು ಪರಿಚಯಿಸಿದ ಭಾರತದ ಮೊದಲ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶದ ಎರಡನೇ ಅತೀ ದೊಡ್ಡ ವಿಮಾನ ನಿಲ್ದಾಣ ಇದಾಗಿದ್ದು ಜನದಟ್ಟನೆ ಹೆಚ್ಚಾಗಿರುವ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಇದನ್ನು ಪರಿಚಯಿಸಲಾಗಿದೆ.

ಏರ್ ಇಂಡಿಯಾ, ಜೆಟ್ ಏರ್ ವೇಸ್, ಸ್ಪೈಸ್ ಜೆಟ್, ಗೋ ಅಂಡ್ ಇಂಡಿಗೋ ಪ್ರಯಾಣಿಕರಿಗೆ ಈ ಸೌಲಭ್ಯ ನೀಡಲಾಗಿದೆ.

ಪ್ರಯಾಣಿಕರ ಲಗೇಜನ್ನು ವೇಗವಾಗಿ ಪರಿಶೀಲಿಸಲು ಸ್ವಯಂ ಸೇವಾ ತಂತ್ರಜ್ಞಾನವನ್ನು (ಸೆಲ್ಫ್ ಬ್ಯಾಗ್ ಡ್ರಾಪ್ ಯೂನಿಟ್) ಅಳವಡಿಸಲಾಗಿದೆ.  

click me!