ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ: ಉಗ್ರಗಾಮಿಯಾಗಿದ್ದಾನೆ ಅಂತಂದುಕೊಂಡವರಿಗೆ ಕಾದಿತ್ತು ಅಚ್ಚರಿ!

By Suvarna Web DeskFirst Published Jun 3, 2017, 5:15 PM IST
Highlights

ಬಾಲಕನೊಬ್ಬ ಮೂರು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ. ಮನೆಯವರೆಲ್ಲಾ ಆತ ಉಗ್ರ ಸಂಘಟನೆಯಿಂದ ಸ್ಪೂರ್ತಿ ಪಡೆದು, ಆ ಸಂಘಟನೆಗೆ ಸೇರಿಕೊಂಡಿದ್ದಾನೆಂಬ ಆತಂಕವಿತ್ತು. ಆದರೀಗ ಆ ಬಾಲಕ ಎಲ್ಲರ ಆತಂಕವನ್ನು ದೂರ ಮಾಡಿದ್ದಲ್ಲದೇ ಅಂತಹ ಯೋಚನೆ ಮಾಡಿದವರೆಲ್ಲರಿಗೂ ತನ್ನ ನೂತನ ಕೆಲಸದಿಂದ ಅಚ್ಚರಿಗೀಡು ಮಾಡಿದ್ದಾನೆ. ಅಷ್ಟಕ್ಕೂ ಆತ ಯಾವ ಕೆಲಸ ಮಾಡುತ್ತಿದ್ದ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಮುಂಬಯಿ(ಜೂ.03): ಬಾಲಕನೊಬ್ಬ ಮೂರು ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ. ಮನೆಯವರೆಲ್ಲಾ ಆತ ಉಗ್ರ ಸಂಘಟನೆಯಿಂದ ಸ್ಪೂರ್ತಿ ಪಡೆದು, ಆ ಸಂಘಟನೆಗೆ ಸೇರಿಕೊಂಡಿದ್ದಾನೆಂಬ ಆತಂಕವಿತ್ತು. ಆದರೀಗ ಆ ಬಾಲಕ ಎಲ್ಲರ ಆತಂಕವನ್ನು ದೂರ ಮಾಡಿದ್ದಲ್ಲದೇ ಅಂತಹ ಯೋಚನೆ ಮಾಡಿದವರೆಲ್ಲರಿಗೂ ತನ್ನ ನೂತನ ಕೆಲಸದಿಂದ ಅಚ್ಚರಿಗೀಡು ಮಾಡಿದ್ದಾನೆ. ಅಷ್ಟಕ್ಕೂ ಆತ ಯಾವ ಕೆಲಸ ಮಾಡುತ್ತಿದ್ದ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಮನೆ ಬಿಟ್ಟು ಹೋದ ಆತ ಬೇರೆಲ್ಲೂ ಹೋಗದೆ ಎಲ್ಲವನ್ನೂ ಮರೆತು ನಾಸಿಕ್'ನಲ್ಲಿರುವ 'ಸಾಯಿ ಪ್ರಸಾದ್' ಎಂಬ ಹೋಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ. ಹೋಟೆಲ್ ಮಾಲಿಕ ಲಕ್ಷಮಣ್ ಜಾದವ್ ಯುವಕನ ವಿಚಾರವಾಗಿ ಮಾತನಾಡಿದ್ದು 'ಮಾರ್ಚ್ 3 ರಂದು ಶರ್ಡಿಯ ಬಸ್ ನಿಲ್ದಾಣದಲ್ಲಿ ಬಾಲಕನೊಬ್ಬ ಮಲಗಿರುವುದನ್ನು ಕಂಡೆ. ಆತನನ್ನು ನೋಡಿ ಕನಿಕರ ಹುಟ್ಟಿತು ಹೀಗಾಗಿ ಆತನನ್ನು ಮಾತನಾಡಿಸಿದೆ. ಆದರೆ ಆ ಬಾಲಕನಿಗೆ ತಾನು ಹೇಗೆ ಅಲ್ಲಿ ತಲುಪಿದೆ ಎಂಬುವುದೇ ನೆನಪಿರಲಿಲ್ಲ. ಆ ಸಮಯದಲ್ಲಿ ತನಗೆ ಹಸಿವಾಗಿದೆ ಎಂಬ ಮಾತುಗಳನ್ನಷ್ಟೇ ಆಡಲು ಆತನಿಂದ ಸಾಧ್ಯವಾಯಿತು. ಗುರುತಿಗಾಗಿ ಆತನ ಬಳಿ ಕೇವಲ ಪ್ಯಾನ್ ಕಾರ್ಡ್ ಮಾತ್ರ ಇದ್ದು, ಅದರಲ್ಲಿ ಸೈಯ್ಯದ್ ಅಶ್ರಫ್ ಎಂಬ ಹೆಸರನ್ನು ನಮೂದಿಸಲಾಗಿತ್ತು. ಆದರೂ ಆ ಕೂಡಲೇ ಆತನಿಗೆ ತಿನ್ನಲು ಊಟ ನೀಡಿದೆ. ಆತನಿಗೆ ಹೋಟೆಲ್ ಕಲಿಸಿದೆ. ಆತನಿಗೆ ಆಂಗ್ಲ ಭಾಷೆ ಚೆನ್ನಾಗಿ ಬರುತ್ತಿತ್ತು. ಹೀಗಾಗಿ ಆತನಿಗೆ ಹೋಟೆಲ್ ಕ್ಯಾಷಿಯರ್ ಆಗಿ ನೇಮಿಸಿದೆ' ಎಂದಿದ್ದಾರೆ.

ಇತ್ತ ಮುಂಬೈನಲ್ಲಿ ಅಶ್ರಫ್ ಮನೆಯವರು ಆತ ನಾಪತ್ತೆಯಾಗಿದ್ದರಿಂದ ಚಿಂತೆಗೊಳಗಾಗಿದ್ದರು. ಮಾಹಿಮ್ ಪೊಲೀಸರಷ್ಠ ಅಲ್ಲದೆ ಮಹಾರಾಷ್ಟ್ರ ಎಟಿಎಂ ಈತನಿಗಾಗಿ ಹುಡುಕಾಟ ಆರಂಭಿಸಿದ್ದರು. ಮಾಧ್ಯಮಗಳಲ್ಲೂ ವರದಿ ಪ್ರಸಾರವಾಗಿದ್ದವು ಯಾಕೆಂದರೆ ಬಾಲಕ ುಗ್ರ ಸಂಘಟನೆ ಸೇರಿರುವ ಶಂಕೆ ಇತ್ತು. ಯಾಕೆಂದರೆ ನಾಪತ್ತೆಯಾಗುವುದಕ್ಕೂ ಮೊದಲು ಆತ ಹತ್ತಿರದ ಸೈಬರ್ ಕೆಫೆಗೆ ಹೋಗುವುದು ಸಾಮಾನ್ಯವಾಗಿತ್ತು. ಬಾಲಕನ ಸಹೋದರನಿಗೂ ಇದೇ ಭಯವಿತ್ತು ಯಾಕೆಂದರೆ ಮುಂಬೈ ಸುತ್ತಮುತ್ತಲಿನಲ್ಲಿ ನಾಪತ್ತೆಯಾದ ಹಲವಾರು ಬಾಲಕರು ಉಗ್ರ ಸಂಘಟನೆ ಸೇರಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು.  

ಇನ್ನು NDTv ಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ 'ನಾನು ಹಲವಾರು ಬಾರಿ ಅಶ್ರಫ್ ಬಳಿ ಆತನ ಮನೆಯವರ ಕುರಿತಾಗಿ ಕೇಳಿದ್ದೆಯಾದರೂ ಆಗೆಲ್ಲಾ ಆತ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ. ಹೀಗೆ 3 ತಿಂಗಳುಗಳು ಕಳೆದು ಹೋಯ್ತು. ಜಾಧವ್ ಹೇಳುವನ್ವಯ ಜೂನ್ 1 ರಂದು ತಾನು ಫೇಸ್'ಬುಕ್'ನಲ್ಲಿ ತನ್ನ ಗೆಳೆಯನೊಬ್ಬನ ಪ್ರೊಫೈಲ್ ಹುಡುಕಾಡುತ್ತಿದ್ದ ಸಂದರ್ಭದಲ್ಲಿ ಅಶ್ರಫ್ ನಾಪತ್ತೆಯಾದ ಕುರಿತಾಗಿ ಪೋಸ್ಟ್ ಒಂದು ಕಂಡು ಬಂತು ಅದು ಆತನ ಸಹೋದರನದಾಗಿತ್ತು. ಆ ಪೋಸ್ಟ್'ನಲ್ಲಿ ಸಂಪರ್ಕಿಸಬೇಕಾದ ನಂಬರ್ ಕೂಡಾ ನಮೂದಿಸಲಾಗಿತ್ತಂತೆ ಹೀಗಾಗಿ ಸಮಯ ಹಾಳು ಮಾಡದೆ ಜಾಧವ್ ಅಶ್ರಫ್ ಸಹೋದರನಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾನೆ.

ಇದನ್ನು ಕೆಲಿದ ಮನೆಯವರಿಗೆ ಬಹಳ ಸಂತೋಷವಾಗುತ್ತದೆ. ಹೀಗಾಗಿ ಆ ಕೂಡಲೇ ನಾಸಿಕ್'ಗೆ ಬರುತ್ತಾರೆ. ಮನೆಯವರನ್ನು ಅಚಾನಕ್ಕಾಗಿ ನೋಡಿದ ಅಶ್ರಫ್ ಕೂಡಾ ಖುಷಿಪಟ್ಟಿದ್ದಾನೆ. ಸದ್ಯ ಅಶ್ರಫ್ ತನ್ನ ಮನೆಯವರೊಂದಿಗೆ ಮುಂಬೈಗೆ ಮರಳಿದ್ದಾನೆ. ಇತ್ತ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ

click me!