ಮುಂಬೈನಲ್ಲಿ 125 ವರ್ಷದ ಕಟ್ಟಡ ಕುಸಿತ; 7ಕ್ಕೂ ಹೆಚ್ಚು ಸಾವು

By Suvarna Web DeskFirst Published Aug 31, 2017, 11:32 AM IST
Highlights

ಕಳೆದ ಕೆಲವು ದಿನಗಳಿಂದ ಸುರಿದಿದ್ದ ಭಾರೀ ಮಳೆಯು ಈ ಕಟ್ಟಡವನ್ನು ಹಾಳು ಮಾಡಿರುವ ಅನುಮಾವಿದೆ. 125 ವರ್ಷದ ಈ ಹಳೆಯ ಕಟ್ಟಡವನ್ನು ಒಂದು ವಾರದ ಹಿಂದಷ್ಟೇ ಮುಂಬೈ ಪಾಲಿಕೆಯವರು ಪರೀಕ್ಷೆ ಮಾಡಿ ಹೋಗಿದ್ದರೆನ್ನಲಾಗಿದೆ. ಕಟ್ಟಡ ಹಾಳಾಗಿದ್ದರೆ ಆಗಲೇ ಪಾಲಿಕೆಯವರು ಯಾಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ.

ಮುಂಬೈ(ಆ. 31): ವಾಣಿಜ್ಯ ನಗರಿಯಲ್ಲಿ 125 ವರ್ಷದ ಹಳೆಯ 5 ಅಂತಸ್ತಿನ ಕಟ್ಟಡವೊಂದು ಕುಸಿದು 7ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ದುರಂತ ಘಟನೆ ನಡೆದಿದೆ. ದಕ್ಷಿಣ ಮುಂಬೈನ ಡೋಂಗ್ರಿ-ಬೆಂಡಿ ಬಜಾರ್ ಪ್ರದೇಶದಲ್ಲಿನ ಶೌಕತ್ ಅಲಿ ರಸ್ತೆಯಲ್ಲಿ ಸಂಭವಿಸಿದ ಈ ದುರಂತದಲ್ಲಿ 30ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರುವ ಅಪಾಯವಿದೆ.

ಎನ್'ಡಿಆರ್'ಎಫ್ ವಿಭಾಗದ 90 ಸಿಬ್ಬಂದಿ ಮತ್ತು 15 ಅಗ್ನಿಶಾಮಕ ವಾಹನಗಳು ಬೆಳಗ್ಗೆ 9 ಗಂಟೆಯಿಂದಲೂ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಈಗಾಗಲೇ 15 ಜನರನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ಸಮೀಪದ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದಲ್ಲಿ ಹಲವರು ಇನ್ನೂ ಸಿಲುಕಿಕೊಂಡಿದ್ದು, ಅವರ ರಕ್ಷಣೆಯ ಕಾರ್ಯ ನಡೆದಿದೆ.

Latest Videos

ಕಳೆದ ಕೆಲವು ದಿನಗಳಿಂದ ಸುರಿದಿದ್ದ ಭಾರೀ ಮಳೆಯು ಈ ಕಟ್ಟಡವನ್ನು ಹಾಳು ಮಾಡಿರುವ ಅನುಮಾವಿದೆ. 125 ವರ್ಷದ ಈ ಹಳೆಯ ಕಟ್ಟಡವನ್ನು ಒಂದು ವಾರದ ಹಿಂದಷ್ಟೇ ಮುಂಬೈ ಪಾಲಿಕೆಯವರು ಪರೀಕ್ಷೆ ಮಾಡಿ ಹೋಗಿದ್ದರೆನ್ನಲಾಗಿದೆ. ಕಟ್ಟಡ ಹಾಳಾಗಿದ್ದರೆ ಆಗಲೇ ಪಾಲಿಕೆಯವರು ಯಾಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ.

ಒಂದು ತಿಂಗಳ ಹಿಂದೆ ಕೂಡ ಇದೇ ನಗರದ ಮತ್ತೊಂದು ಪ್ರದೇಶದಲ್ಲಿ 4 ಅಂತಸ್ತಿನ ಕಟ್ಟಡವೊಂದು ಕುಸಿದು 17 ಮಂದಿ ಸಾವನ್ನಪ್ಪಿದ ದುರಂತ ಮಾಸುವ ಮೊದಲೇ ಈಗ ಇನ್ನೊಂದು ಕಟ್ಟಡ ದುರಂತ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದ್ದು, ಮುಂಬೈ ಪಾಲಿಕೆಯು ಶಿವಸೇನೆಯ ಆಡಳಿತದಲ್ಲಿದೆ.

click me!