
ನವದೆಹಲಿ(ಆ.31): ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡುವ ಅಪಾಯಕಾರಿ ಆನ್ ಲೈನ್ ಆಟವಾದ ‘ಬ್ಲೂವೇಲ್ ಚಾಲೆಂಜ್’ ಕುರಿತು ಆನ್‌ಲೈನ್ ಹುಡುಕಾಟದಲ್ಲಿ ಕೋಲ್ಕತಾ ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದರೆ, ಬೆಂಗಳೂರು 6ನೇ ಸ್ಥಾನ ಪಡೆದಿದೆ ಎಂಬ ಆತಂಕಕಾರಿ ಅಂಕಿ-ಅಂಶಗಳು ಲಭ್ಯವಾಗಿವೆ.
12 ತಿಂಗಳಲ್ಲಿ ವಿಶ್ವದ 30೦ ಪ್ರಮುಖ ನಗರಗಳಲ್ಲಿ ಬ್ಲೂವೇಲ್ ಬಗ್ಗೆ ನಡೆದ ಹುಡುಕಾಟದ ಕುರಿತು ‘ಗೂಗಲ್ ಟ್ರೆಂಡ್ಸ್’ ಮಾಹಿತಿ ನೀಡಿದೆ. ಇದರಲ್ಲಿ ಕೋಲ್ಕತಾ ಮೊದಲ ಸ್ಥಾನದಲ್ಲಿದ್ದರೆ, ವಿಶ್ವದ ಟಾಪ್ 5ರಲ್ಲಿ 3 ಸ್ಥಾನ ಭಾರತೀಯ ನಗರಗಳ ಪಾಲಾಗಿವೆ.
ಇನ್ನು ದೇಶಗಳ ಪಟ್ಟಿ ಗಮನಿಸಿದರೆ ಭಾರತ 3ನೇ ಸ್ಥಾನ ಪಡೆದಿದೆ. ಕೋಲ್ಕತಾ ನಂತರದ ಸ್ಥಾನದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ, ಕೀನ್ಯಾದ ನೈರೋಬಿ, ಅಸ್ಸಾಂನ ಗುವಾಹಟಿ, ತಮಿಳುನಾಡಿನ ಚೆನ್ನೆ‘, ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ ಮುಂಬೈ, ದೇಶದ ರಾಜಧಾನಿ ನವದೆಹಲಿ, ಬಂಗಾಳದ ಹೌರಾ ಮತ್ತು ಫ್ರಾನ್ಸ್'ನ ಪ್ಯಾರಿಸ್ ಇವೆ.
ಆನ್‌ಲೈನ್ ಹುಡುಕಾಟದಲ್ಲಿ ‘ಬ್ಲೂವೇಲ್ ಚಾಲೆಂಜ್ ಗೇಮ್’, ‘ದ ವೇಲ್ ಗೇಮ್’, ‘ಬ್ಲೂವೇಲ್ ಗೇಮ್ ಡೌನ್ ಲೋಡ್’, ‘ಬ್ಲೂವೇಲ್ ಎಪಿಕೆ’, ‘ಬ್ಲೂವೇಲ್ ಸುಸೈಡ್ ಚಾಲೆಂಜ್’ ಇತರ ವಿಷಯಗಳು ಹೆಚ್ಚು ಪ್ರಾಧಾನ್ಯ ಪಡೆದಿವೆ.
ಇನ್ನು ಭಾರತದ ನಗರಗಳನ್ನಷ್ಟೇ ಗಮನಿಸಿದರೆ ಕಳೆದ ಒಂದು ತಿಂಗಳಲ್ಲಿ ಕೋಲ್ಕತಾ, ಗುವಾಹಟಿ, ಚೆನ್ನೆ‘, ಮುಂಬೈ ಮತ್ತು ಬೆಂಗಳೂರು ಕ್ರಮವಾಗಿ ಮೊದಲ 5 ಸ್ಥಾನ ಪಡೆದಿವೆ. ಇತ್ತೀಚೆಗೆ ಭಾರತದಲ್ಲಿ ಈ ಅಪಾಯಕಾರಿ ಆಟದಿಂದಾಗಿ ಯುವಕರ ಸಾವು ಹೆಚ್ಚಾಗಿದ್ದು, ಆ ಬಳಿಕ ಆನ್'ಲೈನ್ ಹುಡುಕಾಟ ಮತ್ತಷ್ಟು ತೀವ್ರಗೊಂಡಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಆನ್'ಲೈನ್ ಜಾಲತಾಣಗಳಿಗೆ ಕೇಂದ್ರ ಸರ್ಕಾರವು ‘ಬ್ಲೂವೇಲ್’ ಆಟ ಇಂಟರ್ನೆಟ್ ನಲ್ಲಿ ಲಭ್ಯ ಇರದಂತೆ ನೋಡಿಕೊಳ್ಳಬೇಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.