ಒಟ್ಟು 107 ಶಾಸಕರು ಬಿಜೆಪಿಗೆ: ಕತೆಯೇ ಮುಗಿಯಿತಾ ಇಲ್ಲಿಗೆ?

By Web DeskFirst Published Jul 13, 2019, 9:52 PM IST
Highlights

ಬರೋಬ್ಬರಿ 107 ಶಾಸಕರು ಬಿಜೆಪಿ ತೆಕ್ಕೆಗೆ| ಶಾಸಕರ ದಂಡು ಕಂಡು ದಂಗಾದ ರಾಜಕಾರಣ| ಬಿಜೆಪಿಯತ್ತ ಕಾಂಗ್ರೆಸ್, ಟಿಎಂಸಿ, ಸಿಪಿಎಂ ಶಾಸಕರು| ಪ.ಬಂಗಾಳ ರಾಜಕೀಯದಲ್ಲಿ ಬಿಜೆಪಿ ಬಿರುಗಾಳಿ?| 107 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದ ಮುಕುಲ್ ರಾಯ್|

ಕೋಲ್ಕತ್ತಾ(ಜು.13): ರಾಜ್ಯದಲ್ಲಿ ವೃದ್ಧಿಸುತ್ತಿರುವ ಬಿಜೆಪಿ ಪ್ರಭಾವ ಕಂಡು ಈಗಾಗಲೇ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಂಗಾಲಾಗಿದ್ದಾರೆ. ಈಗಾಗಲೇ ವಿವಿಧ ಪಕ್ಷಗಳ ನಾಯಕರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇದರಿಂದ ಪ.ಬಂಗಾಳದಲ್ಲಿ ಎಲ್ಲರಿಗೂ ಬಿಜೆಪಿ ಎಂದರೆ ಭಯ ಶುರುವಾಗಿದೆ.

ಈ ಮಧ್ಯೆ ಟಿಎಂಸಿ, ಕಾಂಗ್ರೆಸ್, ಸಿಪಿಎಂ ಪಕ್ಷಗಳ ಸುಮಾರು 107 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬ ಮುಕುಲ್ ರಾಯ್ ಹೇಳಿಕೆ ಇಡೀ ಪ.ಬಂಗಾಳವನ್ನು ತಲ್ಲಣಗೊಳಿಸಿದೆ.

Mukul Roy, BJP in Kolkata: 107 West Bengal MLAs from CPM, Congress and TMC will join BJP. We have their list prepared and they are in contact with us pic.twitter.com/SJ48v5WHMW

— ANI (@ANI)

ಮೂರು ಪಕ್ಷಗಳ ಒಟ್ಟು 107 ಶಾಸಕರು ಪಕ್ಷಕ್ಕೆ ಶೀರ್ಘದಲ್ಲೇ ಸೇರಲಿದ್ದಾರೆ ಎಂದು ಮುಕುಲ್ ರಾಯ್ ಘೋಷಿಸಿದ್ದಾರೆ. ಅಲ್ಲದೇ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಶಾಸಕರ ಹೆಸರನ್ನೂ ಕೂಡ ಪಟ್ಟಿ ಮಾಡಲಾಗಿದೆ ಎಂದು ರಾಯ್ ಸ್ಪಷ್ಟಪಡಿಸಿದ್ದಾರೆ.

click me!