ನಗದು ಸಹಿತ ಆಭರಣ ಖರೀದಿ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆ

Published : Feb 20, 2017, 09:40 PM ISTUpdated : Apr 11, 2018, 12:59 PM IST
ನಗದು ಸಹಿತ ಆಭರಣ ಖರೀದಿ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆ

ಸಾರಾಂಶ

ಕೇಂದ್ರ ಸರ್ಕಾರ ನಗದು ರಹಿತ ವಹಿವಾಟು ಉತ್ತೇಜನ ಹಾಗೂ ಕಪ್ಪುಹಣ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ  2017ರ ವಿತ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬಂಗಾರ ಪ್ರಿಯರು ಬಾಯ್ ಬಿಡುವ ಹಾಗೇ ಮಾಡಿದ್ದು, ಈ ಕಾಯ್ದೆಯ ಮೂಲಕ ನಗದು ವಹಿವಾಟಿಗೆ ಕೇಂದ್ರ ಬ್ರೇಕ್ ಹಾಕಲಿದೆ.

ನವದೆಹಲಿ(ಫೆ.21): ಕೇಂದ್ರ ಸರ್ಕಾರ ನಗದು ರಹಿತ ವಹಿವಾಟು ಉತ್ತೇಜನ ಹಾಗೂ ಕಪ್ಪುಹಣ ಚಲಾವಣೆಯನ್ನು ತಡೆಯುವ ನಿಟ್ಟಿನಲ್ಲಿ  2017ರ ವಿತ್ತ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಬಂಗಾರ ಪ್ರಿಯರು ಬಾಯ್ ಬಿಡುವ ಹಾಗೇ ಮಾಡಿದ್ದು, ಈ ಕಾಯ್ದೆಯ ಮೂಲಕ ನಗದು ವಹಿವಾಟಿಗೆ ಕೇಂದ್ರ ಬ್ರೇಕ್ ಹಾಕಲಿದೆ.

ಕ್ಯಾಶ್​​ ಕೊಟ್ಟರೆ ಗುನ್ನ!: ಸಾಮಾನ್ಯ ಸರಕುಗಳ ಪಟ್ಟಿ ಸೇರಲಿದೆ ಆಭರಣ

2017ರ ಹಣಕಾಸು ಮಸೂದೆ ಅಂಗೀಕಾರವಾದರೆ ಆಭರಣ ಸಾಮಾನ್ಯ ಸರಕುಗಳ ಪಟ್ಟಿ ಸೇರುತ್ತದೆ. 2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಆಭರಣ ಖರೀದಿಸಿದರೆ ಶೇ 1ರಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡಲಿದ್ದು, ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಈ ಪಟ್ಟಿಯಲ್ಲಿರುವ ವಸ್ತುಗಳನ್ನು  2 ಲಕ್ಷಕ್ಕಿಂತ ಹೆಚ್ಚು ನಗದು ನೀಡಿ ಖರೀದಿಸಿದರೆ ಅದಕ್ಕೆ ಶೇ 1ರಷ್ಟು ತೆರಿಗೆ ನೀಡಬೇಕಾಗುತ್ತದೆ. ಈವರೆಗೆ 5 ಲಕ್ಷಕ್ಕಿಂತ ಹೆಚ್ಚು ಬೆಲೆಯ ಆಭರಣಗಳನ್ನು ನಗದು ನೀಡಿ ಖರೀದಿಸಿದರೆ ಮಾತ್ರ ಶೇ 1ರಷ್ಟು ಹೆಚ್ಚುವರಿ ತೆರಿಗೆ ನೀಡಬೇಕಿತ್ತು. ಈಗ 3 ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟು ನಡೆಸಿದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ. ಏಪ್ರಿಲ್​ 1ರಿಂದ ಶೇಕಡ 1 ಟಿಸಿಎಸ್ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 269 ಎಸ್​ಟಿಯಲ್ಲಿ ಸೇರ್ಪಡೆಗೊಳ್ಳಲಿದೆ.

ಸಂಸತ್ತಿನಲ್ಲಿ ಹಣಕಾಸು ಮಸೂದೆ 2017ಕ್ಕೆ ಅಂಗೀಕಾರ ಸಿಕ್ಕಿದ ಕೂಡಲೇ 2017-18ನೇ ಹಣಕಾಸು ವರ್ಷದಲ್ಲಿ ಟಿಸಿಎಸ್ ಅನ್ವಯವಾಗಲಿದೆ. ಭಾರತೀಯರು ಬಂಗಾರ ಪ್ರಿಯರು. ಮದುವೆಯಿಂದ ಹಿಡಿದು ಎಲ್ಲ ಶುಭ ಸಮಾರಂಭಗಳಲ್ಲಿ ಬಂಗಾರದ ಪಾತ್ರ ಇದ್ದೇ ಇರುತ್ತದೆ, ಆದರೆ ಇನ್ನು ಲೆಕ್ಕವಿಲ್ಲದಷ್ಟು ಬಂಗಾರವನ್ನು ಕೂಡಿಟ್ಟುಕೊಳ್ಳುವಂತಿಲ್ಲ. ನಗದು ರಹಿತ ವ್ಯವಹಹಾರಕ್ಕೆ ಈ ನಿಯಮ ಜಾರಿಗೆ ತರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌